ಬೆಂಗಳೂರು:
ಮಾದಕ ವಸ್ತು ಹೆರಾಯಿನ್ ಮಾರಾಟ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ಮಣಿಪುರದ ಯುವತಿಯೊಬ್ಬಳು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಮಣಿಪುರ ಮೂಲದ ವಿಚ್ಚಂತೊನ್ಲಿವ್ ಅಬೋ ನಮೈ (23)ಳನ್ನು ಬಂಧಿಸಿ 3 ಲಕ್ಷ 40 ಸಾವಿರ ಮೌಲ್ಯದ 35 ಗ್ರಾಂ ತೂಕದ ಹೆರಾಯಿನ್, ಆಪೆಲ್ ಮೊಬೈಲ್ ಫೋನ್, 1 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಬಾಣಸವಾಡಿಯ ಸುಬ್ಬಯ್ಯನ ಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಆರೋಪಿಯು ಹೆರಾಯಿನ್‍ನನ್ನು ಮಣಿಪುರ ಹಾಗೂ ಅಸ್ಸಾಂನ ಸಹಚರರಿಂದ ತರಿಸಿಕೊಂಡು ಪ್ರತಿ ಗ್ರಾಂಗೆ 9 ಸಾವಿರ ರೂ. ನಂತೆ ಮಾರಾಟ ಮಾಡಿ ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಳು.
ಐಟಿ ಉದ್ಯೋಗಿಗಳು, ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹೆರಾಯಿನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಖಚಿತ ಮಾಹಿತಿಯಾಧರಿಸಿ ಬಂಧಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








