ಆರು ಬೋಗಿಗಳ ಮೆಟ್ರೊ ರೈಲಿಗೆ ಚಾಲನೆ

ಬೆಂಗಳೂರು

      ಪ್ರಯಾಣಿಕರ ನೆಚ್ಚಿನ ನಮ್ಮ ಮೆಟ್ರೋ ಈಗಾಗಲೇ ಜನ ಸ್ನೇಹಿಯಾಗಿರುವುದು ಗೊತ್ತಿರುವ ವಿಚಾರ. ಜನಸಂದಣಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಆರು ಬೋಗಿಗಳ ಟ್ರೈನ್ ನೀಡಿದ್ದ ಮೆಟ್ರೋ, ಈಗ ಎರಡನೇ ಹಂತದ ಆರು ಬೋಗಿಗಳ ರೈಲಿನ ಚಾಲನೆಗೆ ಸಿಎಂ ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿದರು.

      ಇಂದು ಮೆಜೆಸ್ಟಿಕ್ ನಿಲ್ದಾಣದಲ್ಲಿ ಸಿಎಂ ಕುಮಾರಸ್ವಾಮಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಬಿಎಂಆಟಿಸಿ, ಕೆಎಸ್‍ಆರ್‍ಟಿಸಿ ನಿಲ್ದಾಣಕ್ಕೆ ಸಂಪರ್ಕ ಹೊಂದುವ ಪಾದಚಾರಿ ಮೇಲ್ಸೇತುವೆಗೆ ಚಾಲನೆ ನೀಡಿದರು.

       ಈ ವೇಳೆ ಡಿಸಿಎಂ ಪರಮೇಶ್ವರ್, ಸಾರಿಗೆ ಸಚಿವ ತಮ್ಮಣ್ಣ, ಮೇಯರ್ ಗಂಗಾಂಬಿಕೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಅಲ್ಲದೆ, ಮೆಜೆಸ್ಟಿಕ್ ನಿಂದ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲೇ ಪ್ರಯಾಣಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link