ಸ್ವಚ್ಚತಾ ಐಕಾನಿಕ್ ಸ್ಥಳವಾಗಿ ಮಂತ್ರಾಲಯ

ಬೆಂಗಳೂರು

     ಮಂತ್ರಾಲಯದ ರಾಂಘವೇಂದ್ರ ಮಠವನ್ನು ಸ್ವಚ್ಚ ಭಾರತ ಯೋಜನೆಯಡಿ ಸ್ವಚ್ಚತಾ ಐಕಾನಿಕ್ ಸ್ಥಳವನ್ನಾಗಿ ಗುರುತಿಸಿದ್ದು, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಸ್ವಚ್ಚತೆಯೊಂದಿಗೆ ಭದ್ರತೆಗೂ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ.

    ರಾಘವೇಂದ್ರ ಮಠಕ್ಕೆ ಭೇಟಿ ನೀಡಿ, ಸ್ವಾಮಿಜಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಸ್ವಚ್ಛ ಪಾರಂಪರಿಕ ಸ್ಥಳ, ಯಾತ್ರಾ ಸ್ಥಳ, ಸಾಂಸ್ಕøತಿಕ ಸ್ಥಳಗಳನ್ನು ಗುರುತಿಸಿ ಆಯ್ಕೆ ಮಾಡಲಾಗುತ್ತಿದೆ. ಐಕಾನಿಕ್ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡಲು ಕಂಕಣ ಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ. ಮೂರು ಹಂತಗಳಲ್ಲಿ ಈವರೆಗೆ 30 ಐಕಾನ್ ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.

    ರಾಯರ ಮಠಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳು, ಅಗತ್ಯತೆಗಳ ಕುರಿತು ಚರ್ಚಿಸಲು ಸಚಿವಾಲಯದಿಂದ ಹಿರಿಯ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿತ್ತು. ಈ ತಂಡವು ಮಠದೊಂದಿಗೆ ಕ್ರಿಯಾಯೋಜನೆ ರೂಪಿಸುವ ಕುರಿತು ಸಮಾಲೋಚನೆ ನಡೆಸಲಾಗಿದೆ. ಮಠದ ಆಶಯದಂತೆ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು. ಶೇ. 100 ಪ್ರಮಾಣದಲ್ಲಿ ನೈರ್ಮಲ್ಯ ಕಾಪಾಡುವುದು. ಸಾರ್ವಜನಿಕರಿಗೆ ಶೌಚಾಲಯ ವಾಹನ ನಿಲುಗಡೆ, ಕಸ ಸಂಗ್ರಹಣಾ ಡಬ್ಬಿಗಳನ್ನು ಶ್ರೀ ಕ್ಷೇತ್ರದ ಎಲ್ಲಾ ಮನೆಗಳು ಮತ್ತು ಅಂಗಡಿಗಳಿಗೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.

    ಘನತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ಬ್ಯಾಟರಿ ಚಾಲಿತ ವಾಹನಗಳನ್ನು ಬಳಸುವುದು. ಕಸ ಸಂಸ್ಕರಣಾ ಘಟಕ, ಕಸ ಸಂಸ್ಕರಣಾ ವಾಹನಗಳು, ರಸ್ತೆ ಸ್ವಚ್ಚತಾ ಉಪಕರಣಗಳನ್ನು ನೀಡುವುದು. ಕಸ ಸಂಗ್ರಹಣ ಸ್ಥಳಗಳು ಹಾಗೂ ಗುಂಡಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು. ತ್ಯಾಜ್ಯ ಆಹಾರ ಪದಾರ್ಧಗಳ ಬಾಳೆ ಹಣ್ಣಿನ ಸಿಪ್ಪೆ, ಧನ ಕರುಗಳ ಸಗಣಿಯನ್ನು ಬಯೋಡೈಜೆಸ್ಟ್ ಪದ್ದತಿಯ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಶೇ 100 ರಷ್ಟು ಒಳಚರಂಡಿಯ ಸ್ವಚ್ಚತೆಯನ್ನು ಕಾಪಾಡಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

     ದೇವಸ್ಥಾನದ ಸುತ್ತ ಮುತ್ತ ಹಾಗು ಬೀದಿ ದೀಪಗಳಿಗೆ ಸೌರ ವಿದ್ಯತ್ ಸಂಪರ್ಕ ಕಲ್ಪಿಸುವುದು. ಶುದ್ದ ಕುಡಿಯುವ ನೀರು ಸರಬರಾಜು, ದೇವಸ್ಥಾನ, ಶಾಲೆಗಳು, ಆಸ್ಪತ್ರೆಗಳ ಆವರಣದಲ್ಲಿ ಮಳೆ ನೀರು ಕೊಯ್ಲು ಸಂಗ್ರಹಣೆ ಮಾಡುವುದು. ಸೋಲಾರ್ ವಾಟರ್ ಹೀಟರ್ ಸೌಲಭ್ಯವನ್ನು ಒದಗಿಸಲು ಒತ್ತು ನೀಡುವುದಾಗಿ ಸಚಿವ ರಮೇಶ್ ಜಿಗಜಿಣಗಿ ತಿಳಿಸಿದರು.

     ದೇವಾಲಯ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯಗಳ ಜತೆಗೆ ಹಸಿರು ವನ ನಿರ್ಮಾಣ, ಸಸಿ ನೆಡುವುದು, ಮರಗಳ ಸಂರಕ್ಷಣೆ, ಹಿರಿಯ ನಾಗರಿಕರಿಗೆ ಹಾಗು ವಿಕಲಚೇತನರಿಗೆ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯ ಒದಗಿಸುವುದು. ಹಂದಿಗಳಿಗೆ ಪುನರ್ವಸತಿ ಸ್ಥಳಗಳನ್ನು ದೇವಸ್ಥಾನದಿಂದ ಬಹುದೂರ ಕಲ್ಪಿಸುವುದು. ದೇವಸ್ಥಾನ ಆವರಣವನ್ನು ಪ್ಲಾಸ್ಟಿಕ್ ಮುಕ್ತ, ದೂಮಪಾನ ನಿಷೇಧ ಸ್ಥಳವಾಗಿ ಘೋಷಿಸಲಾಗುವುದು. ರಾಘವೇಂದ್ರ ಸರ್ಕಲ್, ಯೆಮ್ಮಿಗನೂರ್ ರಸ್ತೆ, ಘೋಶಾಲೆ, ಮಕ್ಕಳ ಥೀಮ್ ಪಾರ್ಕ್, ಆಸ್ಪತ್ರೆ, ರಿಂಗ್ ರಸ್ತೆಗಳ ಬಸ್ ನಿಲ್ದಾಣಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link