ಬದುಕಿನಲಿ ಬಾಳು ಹಸನಾಗಬೇಕಾದರೆ
ಕಲಿಯಿರಿ ಕನ್ನಡದ ಸಾಮಾನ್ಯ ಸರ್ಕಾರಿ ಶಾಲೆಯಲಿ
ಮುರುಕು ಗೋಡೆ,ಶಿಥಿಲ ತೊಲೆ,
ಹರುಕು ಚಾವಣಿ ಒಡೆದು ಹೆಂಚು ಬೆಳಕು,
ಹನಿಯ ಒಳಗೆ ಕಾಣೋ ನಮ್ಮ ಶಾಲೆ, ನಮ್ಮ ಮನೆಯೂ
ಭೂತಾಯ ತೊಡೆಯ ಮೇಲೆ ಕುಳಿತು
ಅಕ್ಷರಗಳ ಜೊತೆ ಆಡಿ ಕಲಿತು ಮಾತ್ಸರ್ಯವ ಮರೆತು,
ತಾತ್ಪರ್ಯವಾ ತಿಳಿದು ಅಂಧಕಾರವ ಅಳಿಸಿ ಬಂಧನದ ಬೆಸುಗೆ ಬೆಳೆಸಿ
ಸಮಾನತೆ ಸಹೋದರತೆ ಸಂಕೋಲೆಗಳ ಸರಮಾಲೆ
ಸಾಧಕಗೆ ಸಾಧನೆಗೆ ವರಮಾಲೆ
ದುಡಿಮೆಗೆಂದೇ ಓದುವಲ್ಲ, ಹಸಿವಿಗಿದುವೇ ಮಾರ್ಗವಲ್ಲ
ಬದುಕಿನ ಬವಣೆಗಳ ಎದುರಿಟ್ಟ
ಮಧುರ ಭಾವನೆಗಳ ಮಹಾ ಸಂಭ್ರಮಕೆ
ಭವಿಷ್ಯದ ಮುನ್ನುಡಿ ಬರೆಯುವರು
ಅಳಿಸಿ ಬರೆಯುವ ಅಕ್ಷರವಲ್ಲವದು ಉಸಿರಿರುವ ತನಕ ಉಳಿಯುವುದು
-ವಿರೂಪಾಕ್ಷ .ಎಲ್. ತುರುವೇಕೆರೆ