ವಿಶ್ವ ನೇತದೃಷ್ಠಿ ದಿನದ ಅಂಗವಾಗಿ ಜನಜಾಗೃತಿ ಜಾಥಾ

ಬೆಂಗಳೂರು

  ವಿಶ್ವ ನೇತದೃಷ್ಠಿ ದಿನದ ಅಂಗವಾಗಿ ಬೆಂಗಳೂರಿನ ಮಿಂಟೋ ಕಣ್ಣಾಸ್ಪತ್ರೆಯಲ್ಲಿ ಜನಜಾಗೃತಿ ಜಾಥಾ ಹಾಗೂ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ಏರ್ಪಾಡಾಗಿತ್ತು.

  ಜಾಥಾ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಇಲಾಖೆ ನಿರ್ದೇಶಕ ಡಾ.ಪುಷ್ಪರಾಜ್, ಶೇಕಡ 80ರಷ್ಟು ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಬಹುದು. ಜನರು ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು, ಸಮಸ್ಯೆ ಕಂಡ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

   ಡಯಾಬಿಟಿಕ್ ರೆಟಿನೋಪಥಿ, ಗ್ಲಕೋಮಾ, ಮಕ್ಕಳ ದೃಷ್ಠಿ ಸಮಸ್ಯೆ ಹೀಗೆ ಕಣ್ಣಿನ ಎಲ್ಲಾ ಕಾಯಿಲೆಗಳಿಗೂ ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಚಿಕಿತ್ಸೆಗಳಿವೆ ಎಂದು ಅವರು ಹೇಳಿದರು. ದೃಷ್ಠಿದಾನ ಶ್ರೇಷ್ಠವಾದದ್ದು, ಪ್ರತಿಯೊಬ್ಬರು ಕಣ್ಣು ದಾನಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ರೀತಿಯಲ್ಲಿ ಜನತೆ ಮುಂದೆಬರಬೇಕೆಂದು ಡಾ.ಪುಷ್ಪರಾಜ್ ಕರೆ ನೀಡಿದರು.

    ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದ, ಭಾರತೀಯ ಅಂಚೆ ನಿರ್ದೇಶಕ ನಟರಾಜ್, ಅಂಚೆ ಇಲಾಖೆ 25ನೇ ಸ್ಮರಣ ಸಂಚಿಕೆಯಾಗಿ ನೇತ್ರದಾನ-ಶ್ರೇಷ್ಠದಾನ ಎಂದು ಸಾರಲು ವಿಶೇಷ ಲಕೋಟೆ ಬಿಡುಗಡೆ ಮಾಡಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link