ಬಳ್ಳಾರಿ:
ನಗರದ ಮೋತಿ ವೃತ್ತದಿಂದ ಹೊಸಪೇಟೆ ರಸ್ತೆಯಕಡೆ ಬರುವ ಏಳು ಮಕ್ಕಳ ತಾಯಮ್ಮ ದೇವಿಯ ದೇವಸ್ಥಾನದಲ್ಲಿ ಈಗಾಗಲೇ ಮೂರು ದಿನಗಳಿಂದ ಪೂಜೆ, ಅಭಿಷೇಕ, ಹೊಮ, ಪಾರಾಯಣ ನಡೆಯುತ್ತಿದ್ದು. ಶುಕ್ರವಾರ ತದಿಯಾ ದಿನವಾದ ಇಂದು ಕೌಮಾರಿ ಹೊಮಾ, ಹವನ ವಿಶೇಷವಾಗಿ ಆಚರಿಸಿದರು.
ದೇವಿಗೆ ಪ್ರೀಯವಾದ ದಿನ ಶುಕ್ರವಾಗಿರುವುದಿಂದ ಈ ಹೊಮದ ವಿಶೇಷಗಳನ್ನು ಸಾರ್ವನಜಿಕರಿಗೆ ವಿವರಿಸಿದರು. ಬರುವ ಶುಕ್ರವಾರದವರೆಗೆ ದಿನನಿತ್ಯ ಒಂದೊಂದು ದೇವಿಯ ಹೊಮವನ್ನು ನಡೆಸುತ್ತಿದ್ದು. ಕೊನೆಯೆ ದಿನ 19ರ ವಿಜಯದಶಮಿ ದಿನದಂದು ಪ್ರರ್ಣಾವತಿ ಹೊಮ ನಡೆಯಲಿದೆ.
ಹಾಗೂ ಭಕ್ತಾಧಿಗಳಿಗೆ ಮಹಾ ಪ್ರಸಾದದ ವ್ಯೆವೆಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ರಮಾನಂದ ಸ್ವಾಮಿಜೀ ಅವರು ತಿಳಿಸಿದರು. ಜೊತೆಗೆ ದಿನನಿತ್ಯ ಸಾಯಾಂಕಾಲ ದೇವಿ ಪುರಾಣವನ್ನು ಸಹ ಹಮ್ಮಿಕೊಂಡಿದ್ದೇವೆ. ಹೆಚ್ಚಿನ ರೀತಿಯಲ್ಲಿ ಭಕ್ತಾಧಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ಪಾಲಿಕೆ ಸದಸ್ಯ ಗೋವಿಂದರಾಜುಲು ಸಹ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ