ಹೊಸಪೇಟೆ :
ಇಲ್ಲಿನ ಬಡಾವಣೆ ಠಾಣೆ ಪೊಲೀಸರು ನಗರದ ಹಲವು ಮನೆಗಳಲ್ಲಿ ಕಳುವು ಮಾಡಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಗುರುವಾರ ಬಂಧಿಸಿ ಅವರಿಂದ ರೂ.6,67,500 ಲಕ್ಷ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಬಂಧಿತರನ್ನು 33ನೇ ವಾರ್ಡಿನ ಮರಡಿ ಹನುಮಂತ (27) ಹಾಗು ನೇಕಾರ ಕಾಲೋನಿಯ ಎಸ್.ಕಿರಣ (25) ಎಂದು ಗುರುತಿಸಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳು ಬಡಾವಣೆ ಠಾಣೆ, ಪಟ್ಟಣ ಠಾಣೆ ವ್ಯಾಪ್ತಿಯ ಚಪ್ಪರದಳ್ಳಿ, ಜೆ.ಪಿ.ನಗರ, ನೆಹರು ಕಾಲನಿ, ಎಂ.ಜೆ.ನಗರ ಏರಿಯಾಗಳ ನಾಲ್ಕು ಮನೆಗಳ ಬೀಗ ಮುರಿದು ಪರಾರಿಯಾಗಿದ್ದಾರೆ. ಪ್ರಕರಣದಲ್ಲಿ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್‍ಪಿ ರಘುಕುಮಾರ್, ಟಿಬಿ ಡ್ಯಾಂ ಸಿಪಿಐ ವಿ.ನಾರಾಯಣ ಇವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಜಡಿಯಪ್ಪ, ಎಎಸ್‍ಐ ರಾಮಪ್ಪ ಸಿಬ್ಬಂದಿಗಳಾದ ರಾಮಮೂರ್ತಿ, ಸಾಬಯ್ಯ, ಉಮಾಶಂಕರ್, ಫಣಿರಾಜ್, ಜಾವೀದ್, ಈಶ್ವರ, ಕೊಟ್ರೇಶ್ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳ ಬಲೆ ಬೀಸುವಲ್ಲಿ ಯಶಸ್ವಿಯಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ