ದೇಶದಲ್ಲಿ ಎಲ್ಲರೂ ಸಸ್ಯಾಹಾರಿಗಳೇ ಆಗಿರಬೇಕು ಎಂದು ಆದೇಶ ನೀಡಲು ಸಾಧ್ಯವಿಲ್ಲ ಸುಪ್ರೀಂ ಕೋರ್ಟ್ ಸ್ಪಷ್ಟನೆ

ಸಿರುಗುಪ್ಪ

        ದೇಶದಲ್ಲಿ ಎಲ್ಲರೂ ಸಸ್ಯಾಹಾರಿಗಳಾಗಿರಬೇಕು ಎಂದು ಆದೇಶ ನೀಡಲು ಸಾಧ್ಯವಿಲ್ಲ ಎಂದು ನವದೆಹಲಿ ಸುಪ್ರೀಂಕೋರ್ಟ ಸ್ಪಷ್ಟ ಪಡಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಜನಾಭಿಪ್ರಾಯ ಮುಖಂಡರಾದ ಅಬ್ದುಲ್ ನಬಿ ತಿಳಿಸಿದ್ದಾರೆ. ದೇಶದೆಲ್ಲೆಡೆ ಮಾಂಸಾಹಾರ ಸೇವನೆ ಮಾಂಸ ಉತ್ಪನ್ನಗಳ ಬಳಕೆ ಹೆಚ್ಚಳವಾಗಿರುವುದು ಬಗ್ಗೆ ಕಳವಳ ವ್ಯಕ್ತಪಡಿಸಿದೆ.ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್ ಲೋಕುರ್ ಅವರಿದ್ದ ನ್ಯಾಯಪೀಠ ದೇಶದಲ್ಲಿ ಎಲ್ಲರೂ ಸಸ್ಯಾಹಾರಿಗಳೇ ಆಗಿರಬೇಕೆಂದು ನೀವು ಬಯಸುತ್ತಿದ್ದೀರಾ?

            ಆ ರೀತಿ ನಾವು ಆದೇಶಿಸಲು ಸಾಧ್ಯವಿಲ್ಲ ಎಂದಿತು. ಆ ಮೂಲಕ ಜನರ ಜೀವನ ಕ್ರಮವನ್ನು ಕೋರ್ಟ್ ಆದೇಶಗಳಿಂದ ಬದಲಾಯಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ವಿಚಾರಣೆಯನ್ನು ಮುಂದಿನ ವರ್ಷದ ಫೆಬ್ರವರಿ ಮುಂದೂಡಲಾಗಿದೆ ಮಾಂಸ ರಫ್ತಿಗೆ ನಿಷೇಧ ಹೇರಬೇಕೆಂದು ಕೋರಿ ಹೆಲ್ತಿ ವೆಲ್ತಿ ಎಥಿಕಲ್ ವರ್ಲ್ಡ್ ಮತ್ತು ಗೈಡ್ ಇಂಡಿಯಾ ಟ್ರಸ್ಟ್ ಸಂಸ್ಥೆಗಳು ಸುಪ್ರೀಂ ಕೋರ್ಟಿಗೆ ಪಿಐಎಲ್ ಸಲ್ಲಿಸಿದ್ದರು. ಈ ಹಿಂದೆ ಅಕ್ರಮ ಗೋ ಮಾರಾಟ ಹಾಗೂ ಹತ್ಯೆ ವಿರುದ್ಧ ಸರ್ಕಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದನ್ನು ಸ್ಮರಿಸಬಹುದು. ಜಾನುವಾರುಗಳನ್ನು ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಸಬೆಕು ಎಂದು ನಿರ್ಬಂಧ ಹೆರಲು ಮುಂದಾಗಿದ್ದ ಸರ್ಕಾರಕ್ಕೆ ಇದರಿಂದ ಹಿನ್ನಡೆಯಾಯಿತು ಎಂದು ಅಬ್ದುಲ್ ನಬಿ ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link