ಕನ್ನಡ ಜಾಣ ಜಾಣೆಯರ ಪ್ರತಿಭಾ ಪುರಸ್ಕಾರ 2018

ಬಳ್ಳಾರಿ:

      ಬಳ್ಳಾರಿ ಜಿಲ್ಲೆಯಾದ್ಯಂತ 10 ನೇ ತರಗತಿಯಲ್ಲಿ ಪ್ರಥಮ ಭಾಷೆಯಾದ ಕನ್ನಡ ವಿಭಾಗದಲ್ಲಿ 125 ಕ್ಕೆ 125 ಅಂಕಗಳಿಗೆ ಹಾಗೂ 125 ಕ್ಕೆ 124 ಅಂಕ ಗಳಿಸದ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.325 ವಿದ್ಯಾರ್ಥಿಗಳು ನೊಂದಣಿ ಮಾಡಿದ್ದು 125 ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಆಗಮಿಸಿ ಸನ್ಮಾನಿತರಾದರು.ನಗರದ ರಾಘವ ಕಲಾ ಮಂದಿರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಲಾಯಿತು.

       ಕನ್ನಡ ಕಟ್ಟವ ಕುರುಹುಗಳು ಬಳ್ಳಾರಿಯ ವಿದ್ಯಾರ್ಥಿಗಳು ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ರಾಜ್ಯದ ಕನ್ನಡ ಕಲಿಗಳು ಇತ್ತ ತಿರುಗಿ ನೋಡುವಂತೆ ತಮ್ಮ ಕನ್ನಡ ಜಾಣ್ಮೆಯನ್ನು ಮೆರೆದಿದ್ದಾರೆ.ಕೃಷಿ ಮತ್ತು ಸಾಹಿತ್ಯ ಸಮ್ಮೇಳನವನ್ನು ನಿಭಾಯಿಸಿದ್ದೇವೆ. ಕನ್ನಡದ ಕುರುಹು 2000 ವರ್ಷಗಳ ಹಿಂದೆ ದೂರದ ಗುಜರಾತಿನಿಂದ ಮಹಾರಾಷ್ಟ್ರದವರೆಗೆ ಹಬ್ಬಿದೆ ಎಂದು ಕನ್ನಡ ಸಾಹಿತ್ಯದ ನಿಘಂಟಿನ ಮೂಲಕ ನಮಗೆ ತಿಳಿದು ಬರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಮ ಕಲ್ಮಟ್ ತಮ್ಮ ಆಶಯ ನುಡಿಯಲ್ಲಿ ತಿಳಿಸದರು.

         ಇದರಭಾಗವಾಗಿ ಡಾ: ಡಿ ಎನ್ ರಮೇಶ್ ಗೋಪಾಲ್ ಅಧ್ಯಕ್ಷರು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅವರು ನಾನು ಬಹಳಷ್ಟು ಕಾರ್ಯಕ್ರಮಗಳಲ್ಲಿ ಪ್ರಾಥಮಿಕ, ಪ್ರೌಡ, ಕಾಲೇಜು ಹಂತದಲ್ಲಿ ಭಾಗವಹಿಸಿದ್ದೇನೆ ಆದರೆ ಕನ್ನಡದಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಪ್ರಥಮ ಕಾರ್ಯಕ್ರಮ ಇದಾಗಿದೆ ಎಂದರು. ಕನ್ನಡ ಭಾಷೆಯು ಹೊಸ ಆಯಾಮವನ್ನು ಜಾಲತಾಣದಲ್ಲಿ ಸೃಷ್ಟಿಸಿಕೊಂಡಿದೆ ಇಡೀ ಪ್ರಮಂಚ ಗ್ಲೋಬಲೈಜೇಷನ್ ಆಗಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

         ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೇಲ್,ಎಸ್.ಎಂ ಷಡಾಕ್ಷರಯ್ಯ, ಕೇಣಿ ಜಂಬುನಾಥ ನಿವೃತ್ತ ಅಭಿಯಂತರರು, ಎಂ.ಶರಣಬಸವನಗೌಡ ಅಧ್ಯಕ್ಷರು ಕಿತ್ತೂರು ರಾಣಿ ಚನ್ನಮ್ಮ ಪ್ರೌಡ ಶಾಲೆ , ಸುಗಮ ಸಂಗೀತದ ಯುವರಾಜಗೌಡ ಈ ಕಾರ್ಯಕ್ರಮಕ್ಕೆ ಮೆರಗನ್ನು ತಂದುಕೊಟ್ಟರು ಇನ್ನೂ ಅನೇಕ ಗಣ್ಯ ಮಾನ್ಯರೂ ಕಸಾಪ ದ ಪದಾಧಿಕಾರಿಗಳೂ, ಸದಸ್ಯರುಗಳೂ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link