ನಾಯಕ ಸಮಾಜದ ಬಹು ದೊಡ್ಡ ಹಬ್ಬ ದಸರಾ -ಡಾ.ಸಂಗನಬಸವ ಶ್ರೀಗಳು.

ಹೊಸಪೇಟೆ :

     ದಸರಾ ಈ ಭಾಗದ ನಾಯಕ ಸಮಾಜದ ಬಹು ದೊಡ್ಡ ಹಬ್ಬವಾಗಿದೆ ಎಂದು ಇಲ್ಲಿನ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

     ನಗರದ ತಳವಾರ ಕೇರಿಯ ಶ್ರೀರಾಂಪುರ ದುರ್ಗಮ್ಮ ದೇವಸ್ಥಾನದಲ್ಲಿ ತಳವಾರ ಕೇರಿಯ ದೈವದ ವತಿಯಿಂದ ದಸರಾ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಈ ಭಾಗದ ರೈತರು, ಕೃಷಿಕರು ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುವ ಮೂಲಕ ಹಳೆಯ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಕೀರ್ತಿ ನಾಯಕ ಸಮಾಜಕ್ಕೆ ಸಲ್ಲಬೇಕಾಗಿದೆ ಎಂದರು.

     ವಾಲ್ಮೀಕಿ ಸಮಾಜದ ಬಂಧುಗಳು ಸ್ಥಳೀಯ ಸಣ್ಣಕ್ಕಿ ವೀರಭದ್ರೇಶ್ವರಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಸನ್ನೆ ಹಾಕುವ ಸೇವೆಯನ್ನು ಮಾಡಿಕೊಡುವುದಾಗಿ ಕೋರಿದ್ದು. ಅದಕ್ಕೆ ಶ್ರೀಮಠ ಒಪ್ಪಿ, ಮುಂಬರುವ ರಥೋತ್ಸವ ಸಂದರ್ಭದಲ್ಲಿ ಸೇವೆ ಮಾಡಲು ಒಪ್ಪಿಗೆ ನೀಡಿದೆ.
ತನ್ನದೇ ಆದ ಪರಂಪರೆಯನ್ನು ಹೊಂದಿರುವ ನಾಯಕ ಸಮಾಜ ತಳವಾರಿಕೇರಿಯಲ್ಲಿ ರಾಂಪುರ ದುರ್ಗಮ್ಮ ದೇವಿ ದೇವಸ್ಥಾನ ಹಾಗೂ ಕಲ್ಯಾಣ ಮಂಟಪವನ್ನು ಉತ್ತಮವಾಗಿ ನಿರ್ಮಿಸಿದೆ. ದೇವಸ್ಥಾನದ ಅಭಿವೃದ್ಧಿಗಾಗಿ ಶ್ರೀಮಠದಿಂದ 25 ಸಾವಿರ ರೂ ಗಳ ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ ಶ್ರೀಗಳು ಶ್ರೀಮಠದಿಂದ ಪ್ರತಿ ತಿಂಗಳು ನಡೆಸುವ ಶಿವಾನುಭವ ಸಂಪದ ಕಾರ್ಯಕ್ರಮವನ್ನು ತಳವಾರಕೇರಿಯಲ್ಲಿ ನಡೆಸಲಾಗುವುದು ಇದಕ್ಕೆ ಸ್ಥಳೀಯರು ಸಹಕಾರ ನೀಡಬೇಕು ಎಂದರು.

     ಅಲ್ಲದೆ ಕೊಟ್ಟೂರುಸ್ವಾಮಿ ಸಂಸ್ಥಾನ ಮಠ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದಿದೆ. ಸಿರುಗುಪ್ಪದ ಗಡಿನಾಡ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ 1 ರಿಂದ 10ನೇ ತರಗತಿ ವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಎಲ್ಲಾ ಸಮಾಜದ ಮಕ್ಕಳು ಇದರ ಸದುಪಯೋಗ ಪಡೆಯಬೇಕು ಎಂದರು.

      ಇದೇ ಸಂದರ್ಭದಲ್ಲಿ ಶ್ರೀಗಳು ತಳವಾರಕೇರಿ ದೈವದ ವತಿಯಿಂದ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ವಾಲ್ಮೀಕಿ ವೃತ್ತದಿಂದ ರಾಂಪುರ ದುರ್ಗಮ್ಮ ದೇವಸ್ಥಾನದ ವರೆಗೆ ಶ್ರೀಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ಕುಂಭಹೊತ್ತ ಮಹಿಳೆಯರು ಹಾಗೂ ಡೊಳ್ಳು, ಕೋಲಾಟ, ಭಜನೆ, ಜಾಂಜ್ ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ, ತಳವಾರಕೇರಿ ಮುಖಂಡರಾದ ಹೊಸಕೇರಿ ಶಿವಣ್ಣ, ಎಸ್.ಕೆ.ಮೂರ್ತೆಪ್ಪ, ಕಂಪ್ಲಿ ಕಣಿಮೆಪ್ಪ, ಗುಜ್ಜಲ ಕಣಿಮೆಪ್ಪ, ತಳವಾರ ತಾಯಪ್ಪ, ಮ್ಯಾಸರ ತಾಯಪ್ಪ, ಲಕ್ಷ್ಮಣ, ನಿಶಾನಿ ಕಣಿಮೆಪ್ಪ, ಬೆಳಗೋಡು ರುದ್ರಪ್ಪ, ಬ್ಯಾಲಾಳ್ ಪರಶುರಾಮ, ಕಟಿಗಿ ಕಣಿಮೆಪ್ಪ, ಕಲ್ ಕಣಿಮೆಪ್ಪ, ಶಿವಕುಮಾರ್, ಹನುಮಂತಪ್ಪ, ಅಂಬಣ್ಣ, ವೀರಶೈವ ಸಮಾಜದ ಮುಖಂಡ ಸಾಲಿ ಸಿದ್ದಯ್ಯಸ್ವಾಮಿ ಸೇರಿದಂತೆ ಸಮಾಜದ ಬಂಧುಗಳು ಭಾಗವಹಿಸಿದ್ದರು.ದುರುಗಪ್ಪ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಟಿಗಿ ಜಂಬಯ್ಯ, ಪೂಜಾರಿ ವೆಂಕೋಬ ನಾಯಕ ನಿರ್ವಹಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link