ಬಳ್ಳಾರಿ:
ದಿನಾಂಕ 27-3-2019 ಬುಧವಾರದಂದು ಸಂಜೆ 06:30 ಗಂಟೆಗೆ ನಗರದ ಹೊಟೆಲ್ ರಾಯಲ್ ಫೋರ್ಟ್‍ನಲ್ಲಿ ನಗರದ ಜೀನ್ಸ್ ಉತ್ಪಾದಕರಲ್ಲಿ ಆಯ್ದ ನಾಲ್ಕು ಅತ್ಯುತ್ತಮ ರಫ್ತುದಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಶ್ರೀ. ತಪಸ್ವಿಲಾಲ್ ಜೈನ್-ಪಕ್ಸಾಲ್ ಫ್ಯಾಶನ್ಸ್, ಶ್ರೀ. ಇಂದರ್ ಕುಮಾರ್ ಬಾಫ್ನ-ವರ್ಧಮಾನ್ ಅಪಾರೆಲ್ಸ್, ಶ್ರೀ. ಪುಕ್‍ರಾಜ್ ಜೈನ್-ಹೀಮ್ಯಾನ್ ಗಾರ್ಮೆಂಟ್ಸ್ ಮತ್ತು ಶ್ರೀ. ಉಮೇದ್ ಮಲ್ ಮುತಾ-ಮುತಾ ಡ್ರೆಸೆಸ್ ಇವರನ್ನು ಸನ್ಮಾನಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತಾಗಿ ಪ್ರಾತ್ಯಕ್ಷಿಕೆಯೊಂದಿಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಡಾ.ಎಲ್.ರಮೇಶ್‍ಗೋಪಾಲ್ , ಅವರು ಜಾಗತಿಕವಾಗಿ ವಿವಿಧ ರಾಷ್ಟ್ರಗಳು ರಫ್ತಿನ ಮೇಲೆ ಹೊಂದಿರುವ ಶೇಕಡಾವಾರು ಪ್ರಮಾಣದ ಮೇಲೆ ಬೆಳಕು ಚೆಲ್ಲುತ್ತಾ ತನ್ಮೂಲಕ ಆಯಾ ರಾಷ್ಠ್ರಗಳಿಗೆ ಬರುತ್ತಿರುವ ಲಾಬಾಂಶದ ಬಗ್ಗೆ ಪರಿಚಯಿಸುತ್ತಾ ನಮ್ಮ ರಾಷ್ಟ್ರ ಕೇವಲ ಶೇ4% ರಷ್ಟು ಮಾತ್ರ ರಫ್ತು ಮಾಡುತ್ತಿದ್ದು ಹೇರಳವಾದ ಸಂಪನ್ಮೂಲ ಇದ್ದರೂ ರಫ್ತು ಮಾಡುವಲ್ಲಿ ಮನಸ್ಸು ಮಾಡಿ ವೈಯ್ಯಕ್ತಿಕ ಲಾಭಾಂಶ ಮತ್ತು ದೇಶದ ಆರ್ಥಿಕ ಪ್ರಗತಿಯ ಕಡೆಗೆ ಮನಸ್ಸು ಮಾಡಬೇಕಿದೆ ಎಂದು ನುಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ತೋರಣಗಲ್ಲಿನ ಜೆ.ಎಸ್.ಡಬ್ಲ್ಯೂ ನ ಹಿರಿಯ ಉಪಾಧ್ಯಕ್ಷರಾದ ಶ್ರೀ. ಮಂಜುನಾಥ್ ಪ್ರಭು, ರಫ್ತುದಾರರನ್ನು ಸನ್ಮಾನಿಸಿ ಮಾತನಾಡಿ ಪ್ರತಿಯೊಬ್ಬ ನಾಗರೀಕನು ದೇಶದ ಬಗ್ಗೆ ಅಭಿಮಾನವನ್ನು ಹೇಗೆ ಇಟ್ಟುಕೊಂಡಿರುತ್ತಾನೋ ಹಾಗೆಯೇ ರಾಷ್ಟ್ರದ ಆರ್ಥಿಕ ಉನ್ನತಿಯ ಕಡೆಗೂ ಗಮನ ಹರಿಸಬೇಕಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬಳ್ಳಾರಿಯ ಅತ್ಯಂತ ಸನಿಹದಲ್ಲಿ ಅಪ್ಯಾರಲ್ ಪಾರ್ಕನ್ನು ಅತೀ ಶೀಘ್ರದಲ್ಲಿ ಸ್ಥಾಪಿಸುವ ಎಲ್ಲಾ ಲಕ್ಷಣಗಳಿದ್ದು ಜೀನ್ಸ್ ಉತ್ಪಾದಕರಿಗೆ ಸುದಿನ ಸನ್ನಿಹಿತವಾಗಿದೆ. ರಾಷ್ಟ್ರವೂ ಆರ್ಥಿಕ ಪ್ರಗತಿ ಸಾಧ್ಯವಾಗಬೇಕಾದರೆ ಆಮದು ಕಡಿಮೆ ಪ್ರಮಾಣದಲ್ಲಿ ಆಗಿ ರಫ್ತಿನ ಪ್ರಮಾಣ ಹೆಚ್ಚಾಗಬೇಕು ಅಂದಾಗ ಮಾತ್ರ ದೇಶದ ಆರ್ಥಿಕ ಸುಬಧ್ರತೆಯೊಂದಿಗೆ ವ್ಯಾಪಾರಿಯ ವೈಯ್ಯಕ್ತಿಕ ಬದುಕು ಹಸನವಾಗುತ್ತದೆ ಎಂದು ಕಿವಿಮಾತ ಹೇಳಿದರು. ಮುಖ್ಯ ಅತಿಥಿಗಳ ಮಾತಿನ ನಂತರ ಶ್ರೀಯುತರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಸನ್ಮಾನ ಸ್ವೀಕರಿಸಿ ಜೀನ್ಸ್ ಉತ್ಪಾದಕರ ಸಂಘದ ಅಧ್ಯಕ್ಷರು ಮತ್ತು ಉಳಿದ ಸನ್ಮಾನಿತರು ತಮ್ಮ ಅನುಭವ ಮತ್ತು ಅನಿಸಿಕೆ ಹಂಚಿಕೊಂಡರು, ಈ ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ. ವಿ. ರವಿಕುಮಾರ್ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಶ್ರೀ. ಸಿ. ಶ್ರೀನಿವಾಸ್‍ರಾವ್ ಅವರು ಮಾಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ. ಗಾದಂ ಗೋಪಾಲಕ್ರಿಷ್ಣ ಅವರು ನೆರವೇರಿಸಿದರು. ಈ ಕಾರ್ಯಕ್ರಮವು ಕುಮಾರಿ ಶ್ರೀಪ್ರಿಯಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ನಗರದ ರಫ್ತುದಾರರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಕಮಿಟಿಗಳ ಚೇರ್‍ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು. ವಿಶೇಷ ಆಹ್ವಾನಿತರು, ಜೀನ್ಸ್ ಉತ್ಪಾದಕರ ಸಂಘದ ಪದಾಧಿಕಾರಿಗಳು ಸಾಕ್ಷೀಕರಿಸಿದರು.