ಬ್ಯಾಡಗಿ:
ಉತ್ತರ ಕರ್ನಾಟಕ ರೈತ ಸಂಘದ ತಾಲೂಕಾ ನೂತನ ಅಧ್ಯಕ್ಷರಾಗಿ ಹೊನ್ನಪ್ಪ ಸಣ್ಣಬಾರ್ಕಿ ಅವರು ಆಯ್ಕೆಗೊಂಡಿದ್ದಾರೆ.
ಸ್ಥಳೀಯ ಪ್ರವಾಸಿ ಮಂದರದಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ದಿವಿಗಿಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ತಾಲೂಕಾ ಸಂಘದ ಉಪಾಧ್ಯಕ್ಷರಾಗಿ ಸಣ್ಣಪ್ಪ ಚಿನ್ನಿಕಟ್ಟಿ, ಗೌರವ ಅಧ್ಯಕ್ಷರಾಗಿ ಸುರೇಶಪ್ಪ ಓಲಾಕಾರ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಶಿರಗಂಬಿ, ಕೋಶಾಧ್ಯಕ್ಷ ಜಗದೀಶ ಕಮ್ಮಾರ, ಸಹಕಾರ್ಯದರ್ಶಿ ಗುಡದೇಶ ಲಿಂಗದಹಳ್ಳಿ, ಕಾರ್ಯಾಧ್ಯಕ್ಷ ಜಗದೀಶ ಪಾಟೀಲ, ವಕ್ತಾರರಾಗಿ ಶಂಕ್ರಪ್ಪ ಬಣಕಾರ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಡಿ.ಎಚ್.ಬುಡ್ಡನಗೌಡ್ರ ಸೇರಿದಂತೆ 13 ಜನರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ತಾಲೂಕಾ ಸಂಘದ ಪದಾಧಿಕಾರಿಗಳನ್ನು ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ದಿವಿಗಿಹಳ್ಳಿ ಅಭಿನಂಧಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ