ಬ್ಯಾಡಗಿ:
ಸ್ಥಳೀಯ ಎಪಿಎಂಸಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಸ್.ನಾಯ್ಕರ ಅವರನ್ನು ಪಟ್ಟಣದ ಗಜಾನನ ಬ್ಯಾಂಕ್ ಆವರಣದಲ್ಲಿ ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸಕ್ತ ವರ್ಷ ಬ್ಯಾಡಗಿ ಮಾರುಕಟ್ಟೆಗೆ ದಾಖಲೆಯ ಸಂಖ್ಯೆಯಲ್ಲಿ ಮೆಣಸಿನಕಾಯಿ ಆವಕವಾಗುವ ಲಕ್ಷಣಗಳಿವೆ, ಈ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಮಾರುಕಟ್ಟೆಗೆ ಬರುವಂತಹ ರೈತರಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಎಪಿಎಂಸಿ ಆಡಳಿತ ಮಂಡಳಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದರು.
ಬ್ಯಾಡಗಿ ಮಾರುಕಟ್ಟೆ ವ್ಯಾಪಾರದಲ್ಲಿ ವಿಶ್ವವಿಖ್ಯಾತಿ ಪಡೆದಿದ್ದರೂ ಸಹ ಮಾರುಕಟ್ಟೆಯಲ್ಲಿ ರೈತರಿಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಲ್ಲಿ ಹಿಂದೆ ಬಿದ್ದಿರುವುದಂತೂ ಸತ್ಯ ಈ ಕುರಿತು ಕಳೆದ ಹಲವಾರು ವರ್ಷಗಳಿಂದ ಎಪಿಎಂಸಿ ಮನವಿ ಮಾಡುತ್ತಾ ಬಂದಿದೆ ಅಷ್ಟೇ ಏಕೆ ಮೂಲ ಸೌಕರ್ಯಕ್ಕಾಗಿ ಪ್ರತಿಭಟನೆಯನ್ನೂ ಸಹ ಮಾಡಲಾಗಿದೆ ಹೀಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರೀಯಾಯೋಜನೆ ಜೊತೆಗೆ ಕ್ರಿಯಾಶೀಲರಾಗಿ: ಪ್ರತಿವರ್ಷ ಡಿಸೆಂಬರ್ ನಿಂದ ಏಪ್ರಿಲ್‍ವರೆಗೆ ನಿತ್ಯವೂ ಹತ್ತು ಸಾವಿರಕ್ಕೂ ಹೆಚ್ಚು ರೈತರು ಮೆಣಸಿನಕಾಯಿ ಮಾ ರಾಟಕ್ಕೆ ರೈತರು ಆಗಮಿಸುತ್ತಾರೆ, ಇವರೆಲ್ಲರಿಗೂ ಕುಡಿಯುವ ನೀರು, ಶೌಚಾಲಯ, ಕಡಿಮೆ ದರದಲ್ಲಿ ಭೋಜನ ಹಾಗೂ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಕಲ್ಪಿಸುವಂತೆ ವರ್ತಕರ ಸಂಘವು ಹಲವಾರು ಬಾರಿ ಮನವಿ ಮಾಡುತ್ತಾ ಬಂದಿದೆ ಅದಾಗ್ಯೂ ಎಪಿಎಂಸಿ ಯಿಂದ ಕ್ರೀಯಾಯೋಜನೆಯಾಗುತ್ತಿದೆಯೇ ಹೊರತು ಕ್ರೀಯಾಶೀಲರಾಗುತ್ತಿಲ್ಲ ಎಂದು ಆರೋಪಿಸಿದರು.
ಇನ್ನೆರಡು ಘಟಕಗಳು ಬೇಕು: ಮಾರುಕಟ್ಟೆಯಲ್ಲಿ ಆವರಣದಲ್ಲಿ ಇದೀಗ ಕೇವಲ ಒಂದು ಶುಧ್ಧ ಕುಡಿಯುವ ನೀರಿನ ಘಟಕ ಕೆಲಸ ನಿರ್ವಹಿಸುತ್ತಿದೆ ಇದರ ಜೊತೆಗೆ ಇನ್ನೆರಡು ಕಡೆಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಮಾರುಕಟ್ಟೆ ಆವರಣದಲ್ಲಿ ನಿರ್ಮಿಸುವ ಅವಶ್ಯಕತೆಯಿದೆ, ಈ ಕುರಿತು ಎಪಿಎಂಸಿ ಆಡಳಿತ ಮಂಡಳಿ ಅವಶ್ಯವಿರುವ ಸೂಕ್ತ ಕ್ರಮಗಳನ್ನು ಆದಷ್ಟು ಬೇಗನೆ ಮಾಡುವಂತೆ ಸಲಹೆ ನೀಡಿದರು.
ವಿಶ್ವಾಸಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಯ್ಕರ್, ಬ್ಯಾಡಗಿ ಮಾರುಕಟ್ಟೆ ಅಂತರಾಷ್ಟ್ರೀಯ ಸ್ಥರಕ್ಕೆ ಹೋಗಲು ಇಲ್ಲಿನ ವ್ಯಾಪಾರಸ್ಥರ ದಲಾಲರ ಹಾಗೂ ಕೂಲಿ ಕಾರ್ಮಿಕರ ಶ್ರಮ ಕಾರಣ, ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳು ಸೇರಿದಂತೆ ರೈತರ ಕುಂದು ಕೊರತೆಗಳನ್ನು ಸರಿಪಡಿಸಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದರು.
ಈ ಸಂದರ್ಬದಲ್ಲಿ ಬ್ಯಾಂಕ್‍ನ ನಿರ್ದೇಶಕರಾದ ಬಿ.ಡಿ.ಮಾಳೇನಹಳ್ಳಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹನುಮಂತಪ್ಪ ನಾಯ್ಕರ, ಮನೋಹರ ಅರ್ಕಾಚಾರಿ, ಸುರೇಶ ಜೆ.ಪಾಟೀಲ, ಅಂಬಾಲಾಲ್ ಜೈನ್, ಮಂಜುನಾಥ ಗದಗಕರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ