ಹಾವೇರಿ:
ಮನೆ ಕಟ್ಟುವಾಗ ಮಣ್ಣು ಅಗೆಯಲು ಬಳಸುವ ಗುದ್ದಲಿಯಿಂದ ಹೊಡೆದು ವಿಕಲಚೇತನನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಶಿಡೇನೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು 62 ವರ್ಷದ ಶಿವಮೂರ್ತಯ್ಯ ಕೆಂಬಾವಿಮಠ ಎಂದು ಗುರುತಿಸಲಾಗಿದೆ. ಇವರನ್ನು ಮನೆಯಲ್ಲಿಯೇ ಶಾಂತನಗೌಡ ತೆವರಿ ಎಂಬಾತ ಕೊಲೆ ಮಾಡಿದ್ದಾನೆ. ಬೆಳಗ್ಗಿನ ಜಾವ ಮನೆಯ ಬಾಗಿಲು ಮುರಿದು ಹತ್ಯೆ ಮಾಡಿದ್ದಾನೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಆರೋಪಿ ಶಾಂತನಗೌಡನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ