ಗೋ ಫಾರ್ ಫ್ರೀಡಂ ಗೋಲ್ಡ್ ಆಫರ್ 2024′ ನ ಬಂಪರ್ ಡ್ರಾ ವಿಜೇತರಿಗೆ ಸನ್ಮಾನ…!

ಬೆಂಗಳೂರು

    ದೇಶದ ಪ್ರಮುಖ ಖಾದ್ಯ ತೈಲಗಳ ಬ್ರಾಂಡ್ ಆಗಿರುವ ಫ್ರೀಡಂ ಹೆಲ್ತಿ ಕುಕಿಂಗ್ ಆಯಿಲ್ಸ್, ಬೆಂಗಳೂರಿನ ‘ಗೋ ಫಾರ್ ಫ್ರೀಡಂ ಗೋಲ್ಡ್ ಆಫರ್’ ನ ಬಂಪರ್ ಡ್ರಾ ವಿಜೇತರನ್ನು ಪ್ರಕಟಿಸಿದೆ. ಒಬ್ಬ ಅದೃಷ್ಟಶಾಲಿ ವಿಜೇತರಿಗೆ 50 ಗ್ರಾಂ ಚಿನ್ನದ ನಾಣ್ಯ, ಇಬ್ಬರು ವಿಜೇತರಿಗೆ 10 ಗ್ರಾಂ ಚಿನ್ನದ ನಾಣ್ಯವನ್ನು ನೀಡಲಾಗಿದೆ. ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

    ಹಬ್ಬದ ಋತುವಿನಲ್ಲಿ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳಲು ಪ್ರಚಾರ ಯೋಜನೆ ‘ಗೋ ಫಾರ್ ಫ್ರೀಡಂ ಗೋಲ್ಡ್ ಆಫರ್ 2024’ ಅನ್ನು ಪರಿಚಯಿಸಲಾಯಿತು. ಇದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಛತ್ತೀಸ್ ಗಢ ರಾಜ್ಯಗಳನ್ನು ಒಳಗೊಂಡಿತ್ತು. ಈ ಪ್ರದೇಶಗಳಲ್ಲಿ 100 ಗ್ರಾಹಕರು ಪ್ರತಿದಿನ 1 ಗ್ರಾಂ ಚಿನ್ನವನ್ನು ಗೆದ್ದರು ಮತ್ತು ಬಂಪರ್ ಡ್ರಾದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದರು. ‘ಗೋ ಫಾರ್ ಫ್ರೀಡಂ ಗೋಲ್ಡ್ ಆಫರ್ 2024’ ನಲ್ಲಿ ಭಾಗವಹಿಸಲು ಗ್ರಾಹಕರು ಈ ಮಾರುಕಟ್ಟೆಗಳಲ್ಲಿ ಎರಡು 1-ಲೀಟರ್ ಫ್ರೀಡಂ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯನ್ನು ಖರೀದಿಸಬೇಕಾಗಿತ್ತು.

    ಈ ಯೋಜನೆಗೆ ಎಲ್ಲಾ ರಾಜ್ಯಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆಯಿತು. ಯೋಜನೆಯ ಭಾಗವಾಗಿ 5 ಅದೃಷ್ಟಶಾಲಿ ವಿಜೇತರು (ಪ್ರತಿ ರಾಜ್ಯದಿಂದ 1) 50 ಗ್ರಾಂ ಚಿನ್ನದ ನಾಣ್ಯವನ್ನು ಪಡೆಯುತ್ತಾರೆ, 10 ವಿಜೇತರು (ಪ್ರತಿ ರಾಜ್ಯದಿಂದ 2) 10 ಗ್ರಾಂ ಚಿನ್ನದ ನಾಣ್ಯವನ್ನು ಪಡೆಯುತ್ತಾರೆ. ರಾಜ್ಯದಾದ್ಯಂತ ಒಟ್ಟು 5500 ಅದೃಷ್ಟಶಾಲಿ ವಿಜೇತರು ಒಂದು 1 ಗ್ರಾಂ ಚಿನ್ನದ ನಾಣ್ಯವನ್ನು ಪಡೆದರು. ವಿಜೇತರ ಪಟ್ಟಿಯನ್ನು www.freedomconsumeroffer.com ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ‘ಗೋ ಫಾರ್ ಫ್ರೀಡಂ ಗೋಲ್ಡ್ ಆಫರ್ 2024’ ನ ತಂತ್ರಜ್ಞಾನ ಪಾಲುದಾರ.

   ಜೆಮಿನಿ ಎಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ ಲಿಮಿಟೆಡ್ ನ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷ ಪಿ.ಚಂದ್ರಶೇಖರ ರೆಡ್ಡಿ ಮಾತನಾಡಿ, “ಫ್ರೀಡಂ ಹೆಲ್ತಿ ಕುಕಿಂಗ್ ಆಯಿಲ್ಸ್ ನಲ್ಲಿ ‘ಗೋ ಫಾರ್ ಫ್ರೀಡಂ ಗೋಲ್ಡ್ ಆಫರ್ 2024’ ನಂತಹ ವಿಶಿಷ್ಟ ಪ್ರಚಾರ ಯೋಜನೆಗಳ ಮೂಲಕ ನಮ್ಮ ಗ್ರಾಹಕರಿಗೆ ಗುಣಮಟ್ಟದ ಮತ್ತು ಸುರಕ್ಷಿತ ಉತ್ಪನ್ನಗಳನ್ನು ನೀಡುವುದರ ಜೊತೆಗೆ ಈ ಕೊಡುಗೆಯ ಮೂಲಕ ಅವರಿಗೆ ಖುಷಿ ಹಂಚಿದ್ದೇವೆ. ಈ ಯೋಜನೆಯಲ್ಲಿ ವಿವಿಧ ಹಿನ್ನೆಲೆಯ ಜನರು ಬಹುಮಾನಗಳನ್ನು ಸ್ವೀಕರಿಸಿದ್ದಾರೆ. ನಾವು ಎಲ್ಲಾ ಅದೃಷ್ಟಶಾಲಿ ವಿಜೇತರನ್ನು ಅಭಿನಂದಿಸಲು ಬಯಸುತ್ತೇವೆ ಮತ್ತು ಯೋಜನೆಯಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಿದ ಎಲ್ಲಾ ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದಿದ್ದಾರೆ.

    ಫ್ರೀಡಂ ಹೆಲ್ತಿ ಕುಕಿಂಗ್ ಆಯಿಲ್ಸ್ನ ಮಾರ್ಕೆಟಿಂಗ್ ಜಿಎಂ ಚೇತನ್ ಪಿಂಪಲ್ಖುಟೆ ಮಾತನಾಡಿ, “ಪೋಷಕಾಂಶಗಳಿಂದ ಸಮೃದ್ಧವಾಗಿರುವ ಎಣ್ಣೆಗಳನ್ನು ಒದಗಿಸುವ ಮೂಲಕ ಆರೋಗ್ಯಕರ ಅಡುಗೆ ಅಭ್ಯಾಸವನ್ನು ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ. ‘ಗೋ ಫಾರ್ ಫ್ರೀಡಂ ಗೋಲ್ಡ್ ಆಫರ್ 2024’ ಗ್ರಾಹಕರಿಗೆ ಪ್ರತಿದಿನ ಚಿನ್ನದ ನಾಣ್ಯವನ್ನು ಗೆಲ್ಲುವ ಅವಕಾಶವನ್ನು ನೀಡುತ್ತದೆ. ನಾನು ಎಲ್ಲಾ ಅದೃಷ್ಟಶಾಲಿ ವಿಜೇತರನ್ನು ಅಭಿನಂದಿಸಲು ಬಯಸುತ್ತೇನೆ ಮತ್ತು ಯೋಜನೆಯಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಿದ ಎಲ್ಲಾ ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು.

    ಫ್ರೀಡಂ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯಲ್ಲಿ ವಿಟಮಿನ್ ಎ ಮತ್ತು ಡಿ ಸಮೃದ್ಧವಾಗಿದೆ. ಇದು ನೈಸರ್ಗಿಕವಾಗಿ ಕಂಡುಬರುವ ವಿಟಮಿನ್ ಇ ಯಿಂದ ಸಮೃದ್ಧವಾಗಿದೆ. ಹೀಗಾಗಿ ಇದು ಇಡೀ ಕುಟುಂಬಕ್ಕೆ ಆರೋಗ್ಯಕರ ಆಯ್ಕೆಯಾಗಿದೆ. ಫ್ರೀಡಂ ಸೂರ್ಯಕಾಂತಿ ಎಣ್ಣೆಯ ಪ್ರಮುಖ ಬ್ರಾಂಡ್ ಆಗಿದೆ ಮತ್ತು ಪ್ರಸ್ತುತ ಭಾರತದಲ್ಲಿ ಸೂರ್ಯಕಾಂತಿ ಎಣ್ಣೆ ವಿಭಾಗದಲ್ಲಿ ಮಾರುಕಟ್ಟೆ ಪಾಲಿನಿಂದ ನಂ 1 ಸ್ಥಾನದಲ್ಲಿದೆ. (ಮೂಲ: ನೀಲ್ಸನ್ ಮ್ಯಾಟ್ ಫೆಬ್, 2024).

Recent Articles

spot_img

Related Stories

Share via
Copy link