ದಾವಣಗೆರೆ:
ತಾಲೂಕಿನ ಮಾಯಕೊಂಡ ಕ್ಷೇತ್ರದ ಆನಗೋಡು ಹೋಬಳಿಯ ಈಚಘಟ್ಟ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಏಕತಾ ವೇದಿಕೆಯ ಗ್ರಾಮ ಘಟಕವನ್ನು ವೇದಿಕೆ ರಾಜ್ಯಾಧ್ಯಕ್ಷ ಎನ್.ಹೆಚ್.ಹಾಲೇಶ್ ಉದ್ಘಾಟಿಸಿ, ನಾಮಫಲಕ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಮಂಜುನಾಯ್ಕ ಬಸಾಪುರ ಮಾತನಾಡಿ, ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿ ಕರ್ನಾಟಕ ಏಕತಾ ವೇದಿಕೆಯ ಕಾರ್ಯಕರ್ತ ಪಡೆಯನ್ನು ತಯಾರು ಮಾಡಲಾಗುತ್ತಿದೆ. ಅದರಂತೆ ಈಚಘಟ್ಟ ಗ್ರಾಮದಲ್ಲೂ ಸಹ ಮಾಯಕೊಂಡ ಅಧ್ಯಕ್ಷ ವಿಶ್ವನಾಥ್, ಆನಗೋಡು ಹೋಬಳಿ ಅಧ್ಯಕ್ಷ ರಮೇಶ್ ಮತ್ತು ಗ್ರಾಮ ಘಟಕದ ಅಧ್ಯಕ್ಷ ದೇವರಾಜ್ ಅವರುಗಳ ನೇತೃತ್ವದಲ್ಲಿ ಈಚಘಟ್ಟ ಗ್ರಾಮದಲ್ಲಿ ಗ್ರಾಮ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.
ಇಂದು ಸಸಿ ನೆಡುವುದರ ಮೂಲಕ ನಾಮಫಲಕ ಅನಾವರಣಗೊಳಿಸಲಾಗಿದ್ದು, ಸಸಿಯು ದಿನೇ, ದಿನೇ ಬೆಳೆಯುವಂತೆ ಸಂಘಟನೆಯೂ ವಿಸ್ತಾರಗೊಳ್ಳಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಈಚಘಟ್ಟ ಗ್ರಾಮದಲ್ಲಿ ಪ್ರಸಕ್ತ ಸಾಲಿನಲ್ಲಿ ನವೋದಯ ಪರೀಕ್ಷೆಯಲ್ಲಿ ಆಯ್ಕೆಯಾದ ಸರ್ಕಾರಿ ಶಾಲೆಯ ಸಂಜಯ್, ಗಣೇಶ್ ಮತ್ತು ನಿತೀನ್ ಅವರುಗಳಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸಿ.ಪಿ., ಗ್ರಾಮ ಘಟಕದ ಉಪಾಧ್ಯಕ್ಷ ಮೌನೇಶ್, ಊರಿನ ಮುಖಂಡರಾದ ಹನುಮಂತಪ್ಪ, ಉಮಾಪತಿ, ಮಂಜುನಾಯ್ಕ, ರಾಜೇಂದ್ರ ಗೌಡ, ಮಧು, ಮಂಜುನಾಥ್, ಬಸವರಾಜ್, ಉದಯ್‍ಕುಮಾರ್, ಚನ್ನಪ್ಪ, ಕ್ಷೇತ್ರ ಉಪಾಧ್ಯಕ್ಷ ಜಗದೀಶ್ ಮತ್ತಿತರರು ಹಾಜರಿದ್ದರು.








