‘ವಿಸ್ಮಯ’ ಮೂಲಕ ದುಡ್ಡು ಮಾಡಲು ನಿರ್ಮಾಪಕರ ತಂತ್ರ..!?

     ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಅಭಿನಯದ ‘ವಿಸ್ಮಯ’ ಚಿತ್ರ ಕಳೆದ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆಯಾಗಿದೆ. ಆದರೆ ಸಿನಿಮಾ ವಿತರಕರಿಂದ ನಿರ್ಮಾಪಕರಿಗೆ ಮನವಿ ಬಂದ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವದ ಬಳಿಕ ಚಿತ್ರವನ್ನು  ಮತ್ತೊಮ್ಮೆ ತೆರೆ ಮೇಲೆ ತರಲು ಚಿಂತನೆ ನಡೆಸಿದ್ದಾರೆ. 

ನಟ ಅರ್ಜುನ್‍ಸರ್ಜಾರನ್ನು ಬಿಡದ ‘ಮೀ ಟೂ’ ಬಿಸಿ

      ಅಂದು ಸ್ಯಾಂಡಲ್ ವುಡ್ ನಲ್ಲಿ ‘ವಿಸ್ಮಯ’ ಚಿತ್ರ ಅಷ್ಟಾಗಿ ಸೌಂಡ್ ಮಾಡಲಿಲ್ಲ. ಆದ್ರೀಗ, ಯಾರ ಬಾಯಲ್ಲಿ ಕೇಳಿದರೂ ‘ವಿಸ್ಮಯ’ ಚಿತ್ರದ್ದೇ ಮಾತು. ಅದಕ್ಕೆ ಕಾರಣ ನಟಿ ಶ್ರುತಿ ಹರಿಹರನ್ ಸಿಡಿಸಿರುವ ಬಾಂಬ್. ‘ವಿಸ್ಮಯ’ ಚಿತ್ರದ ಶೂಟಿಂಗ್ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಶ್ರುತಿ ಹರಿಹರನ್ ಆರೋಪಿಸಿದ್ದಾರೆ. ಹೀಗಾಗಿ, ಕಳೆದ ಕೆಲ ದಿನಗಳಿಂದ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ‘ವಿಸ್ಮಯ’ ಚಿತ್ರದ ಕ್ಲಿಪ್ಪಿಂಗ್ಸ್ ಪ್ಲೇ ಆಗುತ್ತಿದೆ.

      ನಟಿ ಶ್ರುತಿ ಹರಿಹರನ್​ ಬಹುಭಾಷಾ ನಟ ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದಾಗಿನಿಂದ ಪ್ರೇಕ್ಷರ ಕಣ್ಣು ‘ವಿಸ್ಮಯ’ ಚಿತ್ರದ ಮೇಲೆ ನೆಟ್ಟಿದ್ದು ಇದನ್ನೇ ಬಂಡವಾಳ ಮಾಡಿಕೊಂಡಿರುವ ನಿರ್ಮಾಪಕ ಇದೀಗ ಚಿತ್ರವನ್ನು ಮತ್ತೊಮ್ಮೆ ತೆರೆ ಮೇಲೆ ತರಲು ನಿರ್ಧರಿಸಿದ್ದಾರೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link