ಕೋನರೆಡ್ಡಿಯವರನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವಂತಾಗಬೇಕು:ಸಂಜಯ ಡಾಂಗೆ

ಹಾವೇರಿ:

        ಮಾಜಿ ಶಾಸಕಎನ್.ಎಚ್.ಕೋನರೆಡ್ಡಿಯವರ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವಂತಾಗಬೇಕು. ಇವರು ಒಂದು ಬಾರಿ ಶಾಸಕರಾಗಿ ಧಾರವಾಡ ಜಿಲ್ಲಾ ಜೆ.ಡಿ.ಎಸ್. ಘಟಕದ ವಿವಿಧ ಕಾರ್ಯದರ್ಶಿಗಳಾಗಿ ಮತ್ತು ಯುವ ಘಟಕದ ಜಿಲ್ಲಾ ಅಧ್ಯಕ್ಷರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ.

         ಉತ್ತರ ಕರ್ನಾಟಕದ ಮಹದಾಯಿ ಹೋರಾಟದ ಮುಂಚೂಣಿ ಹೋರಾಟಗಾರರಾಗಿದ್ದು ಮತ್ತು ರೈತ ಪರ ಹೋರಾಟಗಳಲ್ಲಿಯೂ ಸದನದ ಒಳಗೂ ಮತ್ತು ಹೊರಗೆ ಇವರು ರೈತ ಪರ ದ್ವನಿಯತ್ತುವುದರಲ್ಲಿ ಪ್ರಮುಖರು, ಇವರು ಸರಳ ವ ಸಜ್ಜನ ವ್ಯಕ್ತಿಯಾಗಿದ್ದಾರೆ. ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರನ್ನು ಮುಖ್ಯ ಮಂತ್ರಿಗಳ ಆಪ್ತಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರೆ ಈ ಭಾಗದ ಜನರು ಪಕ್ಷಾತೀತವಾಗಿ ಅವರನ್ನು ಬೆಂಬಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಂತಾಗುತ್ತದೆ ಇವರನ್ನು ಕೂಡಲೇ ನೇಮಕ ಮಾಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ ಡಾ||ಸಂಜಯ ಡಾಂಗೆ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link