ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆ

ಹೊಳಲ್ಕೆರೆ-

         ಇಲ್ಲಿಗೆ ಸಮೀಪದ ಶೃಂಗೇರಿ ಹನುಮನಹಳ್ಳಿ ಗ್ರಾಮದಲ್ಲಿ ಶೃಂಗೇರಿ ಶ್ರೀಶಾರದಾ ಪೀಠ ಮತ್ತು ಶೃಂಗೇರಿ ಹನುಮನಹಳ್ಳಿ ಗ್ರಾಮಸ್ಥರಿಂದ 400 ವರ್ಷಗಳ ಹಳೆಯದಾದ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ದೇವಾಲಯವನ್ನು ಇವರ ಸಂಯುಕ್ತ ಆಶ್ರಯದಲ್ಲಿ ಪುನರ್ ಪ್ರತಿಷ್ಟಾಪನೆಯನೆ ಭಾನುವಾರ ಉದ್ಘಾಟಸಲಾಯಿತು.

         ಶೃಂಗೇರಿ ಶಾದರಾ ಪೀಠಾಧ್ಯಕ್ಷರಾದ ಶ್ರೀ ಭಾರತೀ ತೀರ್ಥಸ್ವಾಮಿಗಳು ಮತ್ತು ಶ್ರೀ ವಿಧುಶೇಖರ ಭಾರತೀಸ್ವಾಮಿಗಳ ಸಂಪೂರ್ಣ ಸಹಕಾರದಿಂದ ಈ ಪುರಾತನ ಶಿಥಲಗೊಂಢ ದೇವಾಲಯವನ್ನು ಪುನರ್ ಜೀರ್ಣೂದ್ದಾರ ಕಾರ್ಯವು 60 ಲಕ್ಷ ರೂ ವೆಚ್ಚದಲ್ಲಿ ಸುಂದರ ದೇವಾಲಯ ನಿರ್ಮಾಣವಾಗಿದೆ.

        ಈ ದೇವಾಲಯ 16 ನೇ ಶತಮಾನದಲ್ಲಿ ಶ್ರೀ ಭರಮಣ್ಣ ನಾಯಕರ ಆಳ್ವಿಕೆಯಲ್ಲಿ ಶೃಂಗೇರಿ ಹನುಮನಹಳ್ಳಿಯಲ್ಲಿ ಶ್ರೀ ಚಂದ್ರಮೌಳಶ್ವೇರ ಸ್ವಾಮಿಯ ವಿಗ್ರಹವನ್ನು ಸ್ಥಾಪಿಸಲಾಗಿತ್ತು.ಶೃಂಗೇರಿ ಶಂಕರ ಸ್ವಾಮೀಜಿಗಳು 1669ರಲ್ಲಿ ಧರ್ಮ ಪ್ರಾಚಾರಕ್ಕೆ ದಕ್ಷಣ ಪ್ರಾಂಥಕ್ಕೆ ಬಂದಾಗ ಈ ಭಾಗಕ್ಕೆ ಬಂದಿದ್ದರು ಆಗ ಮದಕರಿ ಶ್ರೀ ಬಿಚ್ಚುಗತ್ತಿ ಭರಮಣ್ಣ ನಾಯಕರು ಸ್ವಾಮಿಜೀ ಮತ್ತು ಅನೂಯಾಯಿಗಳನ್ನು ಆದಾರದಿಂದ ಸ್ವಾಗತಿಸಿ ಹನುಮನಹಳ್ಳಿ ಗ್ರಾಮ ಮತ್ತು ನೂರಾರು ಎಕರೆ ಭೂಮಿ ಬಲವಳಿಯಾಗಿ ನೀಡಿ ಗೌರವಿಸಿದರು.

         ಆಗ ಶ್ರೀಗಳು ಆ ಗ್ರಾಮವನ್ನು ಶೃಂಗೇರಿ ಹನುಮನಹಳ್ಳಿ ಎಂದು ನಾಮಕರಣ ಮಾಡಿ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ದೇವಲಯ ನಿರ್ಮಿಸಿದರು. ಅಂದಿನಿಂದ ಪೂಜ ಕಾರ್ಯಗಳು ಸಂಪ್ರದಾಯ ಬದ್ದವಾಗಿ ಪೂಜೆಗಳು ನಡೆದು ಕೂಂಡು ಬಂದಿವೆ. ದೇವಸ್ಥಾನ ಕ್ರಮೇಣ ಶಿಥಿಲಗೊಂಡಿತ್ತು.

         ಈ ಬಗ್ಗೆ ಗ್ರಾಮದ ಮುಖಂಡರಾದ ನಿವೃತ್ತ ಪೊಲೀಸ್ ಅದಿಕಾರಿ ರುದ್ರಪ್ಪ ರಾಜಪ್ಪ, ಜಯರಾಮಪ್ಪ, ಮತ್ತಿತರರು ಶ್ರೀ ಮಠಕ್ಕೆ ಹೋಗಿ ಶಿಥಿಲ ಗೊಂಡಿರುವ ದೇವಾಲಯ ಪುನರ್ ನಿರ್ಮಾಣ ಮಾಡಲು ಶ್ರೀಗಳ ಅನುಮತಿಗೆ ಮನವಿ ಮಾಡಿದರು. ಆಗ ಶ್ರೀಗಳು ಈ ದೇವಾಲಯದ ಇತಿಹಾಸದಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದಲ್ಲದೆ ಆ ದೇವಾಲಯದ ಪುನರ್ ನಿರ್ಮಾಣದ ಮಾಡುವ ಭರವಸೆ ನೀಡಿ ಮಠದವತಿಯಿಂದ 50 ಲಕ್ಷ ರೂಗಳಿಂದ ತಾವೇ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದರು.

         ಈ ದೇವಾಲಯಕ್ಕೆ ಗ್ರಾಮಸ್ತರು 1 ಲಕ್ಷ ರೂ.ಗಳನ್ನು ಪೀಠಕ್ಕೆ ಕಾಣಿಕೆಯಾಗಿ ನೀಡಿದರು. ಕಟ್ಟಡ ನಿರ್ಮಾಣ ವಿಗ್ರಹಗಳನ್ನು ಸ್ಥಾಪನೆ ದೇವಾಲಯ ಉದ್ಘಾಟನೆಯ ಸಕಲ ಕಾರ್ಯಕ್ರಮಗಳನ್ನು ಶ್ರೀ ಮಠವೆ ಬರಸಿ ವಿದಿ ವಿದಾನದ ಪ್ರಕಾರ ದೇವಾಲಯವನ್ನು ತಮ್ಮ ಅರ್ಚಕರಿಂದಲೆ ವಿದಿವತ್ತಾಗಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

         ಈ ಕಾರ್ಯಕ್ರಮ ಉಸ್ತುವಾರಿಯನ್ನು ಗ್ರಾಮದ ಎಲ್ಲಾ ಸಮುದಾಯದವರು ಒಂದಾಗಿ ಭಾಗವಹಿಸಿ ಭಕ್ತಿ ಪೂರ್ವಕವಾಗಿ ಶ್ರೀ ಸ್ವಾಮಿಯ ಕಾರ್ಯಕ್ರಮದಲ್ಲಿ ಭಾಗಿಗಳಾದರು.

       ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಎಂ. ಚಂದ್ರಪ್ಪ ಭಾಗಿಯಾಗಿದ್ದು ಮುಂದೆ ಈ ದೇವಾಲಯದ ಆವರಣಕ್ಕೆ ಕಾಂಪೌಂಡ್ ಮತ್ತು ಗ್ರಾಮದೇವತೆ ಮಸಿಯಮ್ಮ ದೇವಾಲಯದ ಗೋಪುರ ನಿರ್ಮಾಣ ಮಾಡಿಸಿಕೊಡುವುದಾಗಿ ಗ್ರಾಮಸ್ತರಿಗೆ ಭರವಸೆ ನೀಡಿದರು.

        ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ದಾಸೋಹ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡಿದ್ದರು. ಬಹಳ ವರ್ಷಗಳ ಗ್ರಾಮಸ್ಥರ ಕನಸು ನೆನಸಾದ ಬಗ್ಗೆ ತುಂಬ ಸಂತಸ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link