ಬೆಂಗಳೂರು: 
ಈ ಗೆಲುವು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಅಲ್ಲ. ಅಲ್ಲೂ ಈ ವಿಜಯದ ಸರಣಿ ಮುಂದುವರಿಯಲಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ವ್ಯಾಕ್ಯಾನಿಸಿದ್ದಾರೆ
ಸದಾಶಿವ ನಗರದ ನಿವಾಸದಲ್ಲಿ ಮಾತನಾಡಿ, ಜನರಿಗೆ ಈ ಗೆಲುವು ಬೇಕಿತ್ತು. ನಮಗೆ ದಕ್ಕಿದೆ. ಉಪಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆಯಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಹಣ ಹಂಚಿದ್ದಾದರೆ ದೂರು ಕೊಡಬಹುದಿತ್ತು. ಕೇಂದ್ರದ ಬಿಜೆಪಿ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ಕೈ ತೂರಿಸುತ್ತದೆ. ಅಂದಮೇಲೆ ಹಣ, ಹೆಂಡದ ವಿಚಾರದಲ್ಲಿ ತಿಳಿಯಲಿಲ್ವಾವೆ ಎಂದು ವ್ಯಂಗ್ಯವಾಡಿದರು.








