ಬೆಂಗಳೂರು
ದುಬಾರಿ ಬುಲೆಟ್ ಬೈಕ್ಗಳನ್ನು ಕಳವು ಮಾಡು ಮೋಜು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ ಆತ ನೀಡಿದ ಮಾಹಿತಿಯಾಧರಿಸಿ ಜೈಲಿನಲ್ಲಿದ್ದ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 24 ಲಕ್ಷ ಮೌಲ್ಯದ 14 ಬೈಕ್ಗಳನ್ನು ಕಳವು ಮಾಡಿರುವುದನ್ನು ಕೆಆರ್ ಪುರಂ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ವೈಟ್ಫೀಲ್ಡ್, ಕೆಆರ್ ಪುರಂ ಸುತ್ತಮುತ್ತಲ ಪ್ರದೇಶಗಳಲ್ಲಿ ರಾಯಲ್ಎನ್ಫೀಲ್ಡ್ ಬೈಕ್ಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಇನ್ಸ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಅಯ್ಯಪ್ಪನಗರದ ಯಲ್ಲಪ್ಪ ಲವರಾಜು ಎಂಬಾತನನ್ನು ಬಂಧಿಸಿ ವಿಚಾರಣೆ ಕೈಗೊಂಡಿತ್ತು
ಆರೋಪಿಯಿಂದ ಕಳವು ಮಾಡಿದ್ದ ಬೈಕ್ವೊಂದನ್ನು ವಶಪಡಿಸಿಕೊಂಡು ಆತ ವಿಚಾರಣೆಯಲ್ಲಿ ನೀಡಿದ ಮಾಹಿತಿಯಾಧರಿಸಿ ಆಂಧ್ರದ ಮದನಪಲ್ಲಿಯ ಸಬ್ಜೈಲಿನಲ್ಲಿದ್ದ ರವಿತೇಜ, ಸೋಯಲ್, ಯುವತೇಜ, ಧರ್ಮತೇಜ ಹಾಗೂ ಪ್ರಸಾದ್ ಅವರನ್ನು ಬಾಡಿವಾರೆಂಟ್ ಮೂಲಕ ಕರೆತಂದು ವಿಚಾರಣೆ ನಡೆಸಿದಾಗ 14 ಬೈಕ್ಗಳನ್ನು ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳಿಂದ ಬೈಕ್ಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಮೋಜಿನ ಜೀವನ ನಡೆಸಲು ದುಬಾರಿ ಬೈಕ್ಗಳನ್ನು ಕಳವು ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ಕೆಆರ್ ಪುರಂ, ರಾಮಮೂರ್ತಿ ನಗರ, ಪುಟ್ಟೇನಹಳ್ಳಿ, ಸದಾಶಿವನಗರ ಪೊಲೀಸ್ ಠಾಣೆಗಳ ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








