ಬೆಂಗಳೂರು
ಎಟಿಎಂ ಕೇಂದ್ರಗಳಿಗೆ ಹಣ ಹಾಕಲು ಬಂದಿದ್ದ ಗುತ್ತಿಗೆ ಪಡೆದಿದ್ದ ವಾಹನದ ಚಾಲಕನೇ ಸಿನಿಮೀಯ ರೀತಿಯಲ್ಲಿ 75 ಲಕ್ಷ ನಗದು ದೋಚಿ ಪರಾರಿಯಾಗಿರುವ ದುರ್ಘಟನೆ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಜಿ ಹಳ್ಳಿಯ ಆಸಿಸ್ ಬ್ಯಾಂಕ್ನ ಎಟಿಎಂ ಕೇಂದ್ರಕ್ಕೆ ಹಣ ಹಾಕಲು ಗುತ್ತಿಗೆ ಪಡೆದಿದ್ದ ರೈಟಂ ಕಂಪನಿಯ ವಾಹನವು ಕಳೆದ ನ. 5 ರಂದು ರಾತ್ರಿ 7.30ರ ವೇಳೆ ಕೇಂದ್ರದ ಬಳಿ ಬಂದಾಗಲ ಅದರಲ್ಲಿದ್ದ ಚಾಲಕ, ಜೊತೆಯಲ್ಲಿದ್ದ ಗನ್ಮ್ಯಾನ್ನ ಗಮನ ಬೇರೆಡೆ ಸೆಳೆದು 75 ಲಕ್ಷ ಹಣವನ್ನು ದೋಚಿದ್ದಾನೆ. ದೋಚಿದ ಹಣವನ್ನು ಮತ್ತೊಂದು ವಾಹನದಲ್ಲಿ ಹಾಕಿಕೊಂಡು ತಾನು ಚಲಾಯಿಸಿಕೊಂಡು ಬಂದಿದ್ದ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಜೊತೆಯಲ್ಲಿದ್ದ ಗನ್ಮ್ಯಾನ್ಗೆ ಸ್ವಲ್ಪ ಹೊತ್ತಿನ ನಂತರ ವಿಷಯ ಗೊತ್ತಾಗಿ ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೆಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಚಾಲಕನಿಗಾಗಿ ತೀವ್ರಶೋಧ ನಡೆಸಿದ್ದಾರೆ ಎಂದು ಡಿಸಿಪಿ ರಾಹುಲ್ಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








