ಬಳ್ಳಾರಿ
ಎಚ್ಎಲ್ಸಿ ಕಾಲುವೆಯಲ್ಲಿ ಇತ್ತೀಚೆಗೆ ಕಾಲುಜಾರಿಬಿದ್ದು ಸೆಂಟ್ ಮೇರಿ ಕಾಲೋನಿಯ ನಿವಾಸಿ ಹ್ಯಾರಿ ಅವರ ಇಬ್ಬರು ಚಿಕ್ಕಹೆಣ್ಮಕ್ಕಳ ಸಾವನ್ನಪ್ಪಿದ ಹಿನ್ನೆಲೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ಶುಕ್ರವಾರ ಹ್ಯಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಶಾಸಕರ ಅನುದಾನದ ಅಡಿ 5ಲಕ್ಷ ರೂ.ಗಳ ಪರಿಹಾರ ಒದಗಿಸಲಾಗುವುದು. ಈ ಮಕ್ಕಳ ತಂದೆ-ತಾಯಿ ಕೂಲಿಕಾರ್ಮಿಕರಾಗಿರುವ ಕಾರಣ ಮತ್ತು ಅವರಿಗೆ ಮನೆ ಇಲ್ಲದಿರುವುದನ್ನು ಅರಿತು ಅವರು ಒಂದು ಮನೆ ನಿರ್ಮಿಸಿಕೊಡಲು ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಪ್ರಸಾದ, ಜೆರಿ,ಚಕ್ರಿ,ಸೋಮು, ಆಯಾಸ್ ಖಾನ್, ಅಲ್ಲಾಭಕ್ಷ,ಪಿ.ಶೇಖರ ಸೇರಿದಂತೆ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ