ಬಳ್ಳಾರಿ
ಜಿಲ್ಲೆಯ ಭೂಮಿ ಮತ್ತು ವಸತಿ ಸಮಸ್ಯೆಗಳನ್ನು ಭಗೆಹರಿಸಲು ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಬೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು. ಜಮೀನು ರಹಿತರಿಗೆ ಫಾರಂ 50, 53 ಹಾಗೂ 94ಸಿ, 94ಸಿಸಿ ಸಲ್ಲಿಸಿದವರಿಗೆ ಭೂಮಿ ನಿವೇಶನಾ ಹಕ್ಕು ಪತ್ರ ವಿತರಿಸಬೇಕು. ಜಿಲ್ಲೆಯಲ್ಲಿ ಸಾಗುವಳಿ ಮಾಡದೇ ಇರುವ ಸರ್ಕಾರಿ ಭೂಮಿ ಗೋಮಾಳಗಳನ್ನು ಸರ್ವೆ ನಡೆಸಿ ಭೂರಹಿತರಿಗೆ ನೀಡಬೇಕೆ. ಸುಳ್ಳು ದಾಖಲೆ ಸೃಷ್ಟಿಸಿ ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದನ್ನು ಹಿಂಪಡೆಯಬೇಕು. ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತ ರೈತರಿಗೆ ಅಲ್ಲಿಯ ಭೂಮಿಯ ಪತ್ರ ನೀಡಬೇಕು.
ಪಹಣಿ, ಸರ್ವೆ, ಭೂಮಿಯ ನಕ್ಷೆ ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ಅಧಿಕಾರಿಗಳು ವರ್ಷಾನೂಗಟ್ಟಲೇ ಅಲೆದಾಡುತ್ತಿರುವವರನ್ನು ತಡೆಯಬೇಕು ಎಂದು ಆಗ್ರಹಿಸಿದರು. ಈ ಬೃಹತ್ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಸೇರಿದಂತೆ ಹೋರಾಟ ಸಮಿತಿಯ ಮುಖಂಡ ಕರಿಯಪ್ಪ ಗುಡಿಮನಿ ನೇತೃತ್ವದಲ್ಲಿ ಮೇರವಣಿಗೆ ನಡೆಸಿ ಗಡಗಿ ಚನ್ನಪ್ಪ ವೃತ್ತಕ್ಕೆ ತೆರಳಿ ಮತ್ತೆ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕಾರ್ಯದರ್ಶಿ ಮಂಜಪ್ಪ, ಎ.ವಸಂತರಾಜ್ ಕಾಳೆ, ಪಿ.ಎಲ್ಲಮ್ಮ, ಲಿಂಗಪ್ಪ, ವಕೀಲರು ನರಸಿಂಹರೆಡ್ಡಿ, ಹೆಚ್.ರಾಮಚಂದ್ರ, ಶಂಕರಯ್ಯ, ಕೆ.ಅನಂತಕುಮಾರ, ಸೋಮಶೇಖರ ಸೇರಿದಂತೆ ನೂರಾರು ಜನ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯೆರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ