ಅಲ್ಪ ಸಂಖ್ಯಾತರ ಕಲ್ಯಾಣಾಭಿವೃದ್ಧಿಗಾಗಿ 13ಕೋಟಿ ರೂ ಸರ್ಕಾರಕ್ಕೆ ಪ್ರಸ್ತಾವನೆ

ಹಗರಿಬೊಮ್ಮನಹಳ್ಳಿ:

     ಕ್ಷೇತ್ರದ ಮರಿಯಮ್ಮನಹಳ್ಳಿ, ತಂಬ್ರಹಳ್ಳಿ, ಕೊಟ್ಟೂರು ಹಾಗೂ ಹಗರಿಬೊಮ್ಮನಹಳ್ಳಿ ಎಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿಗಾಗಿ ಸರ್ಕಾರಕ್ಕೆ 13 ಕೋಟಿ ಪ್ರಸ್ತಾವನೆಯನ್ನು ಕಳಿಸಲಾಗಿದೆ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.

    ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ಪವಿತ್ರ ರಂಜಾನ್ ಹಬ್ಬ ಎಂಬುದು ಮುಸ್ಲಿಂ ಬಾಂಧವರ ಒಂದು ತಿಂಗಳ ಉಪವಾಸದ ಕಠಿಣ ವ್ರತವಾಗಿದೆ. ಈ ಅವಧಿಯಲ್ಲಿ ಎಲ್ಲಾ ಮುಸಲ್ಮಾನರು ಶ್ರದ್ಧಾಭಕ್ತಿಗಳಿಂದ ಭಗವಂತನನ್ನು ದಿನಂಪ್ರತಿ ಪ್ರಾರ್ಥಿಸುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಆಲೋಚನೆಗಳನ್ನು ಮಾಡದೇ ಶಿಸ್ತು ಬದ್ಧತೆಯಿಂದ ರಂಜಾನ್ ಆಚರಿಸುತ್ತಾರೆ.

      ಇದು ಭಾವೈಕ್ಯತೆಯ ಸಂಕೇತವಾಗಿದೆ. ಬಡವ ಬಲ್ಲಿದನೆಂಬ ಭೇದಬಾವವಿಲ್ಲದೇ ಉಳ್ಳವರು ಇಲ್ಲದವರಿಗಾಗಿ ದಾನ ಧರ್ಮಗಳನ್ನು ಮಾಡುವ ಮೂಲಕ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾ ಬಂದಿದ್ದಾರೆ. ಅದರಲ್ಲೂ ನನ್ನ ಕ್ಷೇತ್ರದಲ್ಲಿ ಹಿಂದೂ ಮುಸ್ಲೀಂ ಎಂಬ ಭೇದಬಾವವಿಲ್ಲದೇ ಎಲ್ಲರೂ ಸಹೋದರರಂತಿದ್ದಾರೆ. ಈಗಾಗಲೇ ಮುಸ್ಲೀಂ ಬಾಂಧವರ ಕಲ್ಯಾಣಕ್ಕಾಗಿ ಹಲವರು ಯೋಜನೆಗಳನ್ನು ರೂಪಿಸಿದ್ದೇವೆ ಅದೇ ರೀತಿ ಹಗರಿಬೊಮ್ಮನಹಳ್ಳಿಯಲ್ಲಿ ಒಂದು ಸುಸಜ್ಜಿತವಾದ 50 ಲಕ್ಷ ವೆಚ್ಚದಲ್ಲಿ ಶಾದಿಮಹಲನ್ನು ನಿರ್ಮಿಸಲು ಹಂತ ಹಂತವಾಗಿ ಶಾಸಕರ ಅನುದಾನವನ್ನು ನೀಡುತ್ತೇನೆ ಎಂದರು.

     ಒಂದು ತಿಂಗಳಿನಿಂದ ಆಚರಿಸುತ್ತಾ ಬಂದ ಪವಿತ್ರ ರಂಜಾನ್ ಹಬ್ಬವನ್ನು ಈ ದಿನ ಮುಸಲ್ಮಾನ ಬಾಂಧವರೆಲ್ಲಾ ಸೇರಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಸಂಭ್ರಮ ಸಡಗರದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನೆಲ್ ಇಸ್ಮಾಯಿಲ್, ಅಕ್ಕಿ ತೋಟೇಶ್, ಹುಡೇದ ಗುರುಬಸವರಾಜ, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಬಾಬುವಲಿ, ಕುಲ್ಮಿ ರೆಹಮಾನ್, ಇರ್ಫಾನ್, ಅಜೀಜುಲ್ಲಾ, ಜೋಗಿ ಹನುಮಂತ, ಮದರ್ ಸಾಬ್, ಜಂದಿಸಾಬ್ ಹಾಗೂ ನಗರದ ಎಲ್ಲಾ ಮುಸ್ಲೀಂ ಬಾಂಧವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap