ಬಳ್ಳಾರಿ
ಜಿಲ್ಲಾಡಳಿತ, ಆಂದ್ರ ಪ್ರದೇಶದ ಗುಂಟೂರ್ ಜಿಲ್ಲೆಯ 10ನೇ ಎನ್.ಡಿ.ಆರ್.ಎಫ್, ನ್ಯಾಷನಲ್ ಡಿಜಾಸ್ಟರ್ ರೆಸ್ಪಾನ್ಸ್ ಫೋರ್ಸ್, ಗೃಹರಕ್ಷಕದಳ, ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಕೋಪ ಜಾಗೃತಿ ದಿನಚಾರಣೆಯ ಅಂಗವಾಗಿ ವಿಪತ್ತು ನಿರ್ವಹಣಾ ಸಿದ್ದತಾ ಕಾರ್ಯಕ್ರಮವನ್ನು ಗೃಹರಕ್ಷಕದಳ ತರಬೇತಿ ಕೇಂದ್ರದಲ್ಲಿ ಭಾನುವಾರದಂದು ನಡೆಯಿತು.
ಟೀಮ್ ಕಮಾಂಡರ್ ಹಾಗೂ ಇನ್ಸ್‍ಪೆಕ್ಟರ್ ಸಂತೋಷ್ ಕುಮಾರ್ ಅವರು ಈ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಪ್ರಕೃತಿ ವಿಕೋಪದಿಂದ ಆಗುವ ಅನಾಹುತಗಳು, ಕಟ್ಟಡ ಕುಸಿತ, ರಾಸಾಯನಿಕ ಪದಾರ್ಥಗಳಿಂದ ಆಗುವ ಅನಾಹುತಗಳು ಹೀಗೆ ಇನ್ನೂ ಮುಂತಾದದವುಗಳಿಂದ ಪಾರಾಗಲು ಹಾಗೂ ಮುಖ್ಯವಾಗಿ ಗೃಹರಕ್ಷಕದಳ ಸಿಬ್ಬಂದಿ ಇವರಿಗೆ ಪ್ರಕೃತಿ ವಿಕೋಪದಲ್ಲಿ ಉಪಯೋಗವಾಗುವ ಸಲಕರಣೆಗಳನ್ನು ಹೇಗೆ ಉಪಯೋಗಿಸಬೇಕೆಂದು ವಿವರವಾಗಿ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಘಟಕಾಧಿಕಾರಿ ಜಿ.ಬಸವರಾಜ್, ಗೃಹರಕ್ಷಕದಳದ ಪ್ಲಟೂನ್ ಕಮಾಂಡರ್ ಜೆ.ಸುರೇಶ್, ಬಿ.ಕೆ.ಬಸವಲಿಂಗ, ಎನ್.ಡಿ.ಆರ್.ಎಫ್ ತಂಡದ ಸದಸ್ಯರುಗಳಾದ ಜೆ.ಎ.ಥವಮಣಿ, ಎ.ಎಸ್.ಐ. ರಮೇಶ್, ಗಿರಿ, ಸುರೇಶ್, ರಾಜೀವ್ ಸಿಂಗ್, ಓಬುಳೇಶ್, ಬಿ.ಬೋರೊ, ಸಂತುಲಾಲ್ ಹಾಗೂ ಎನ್.ಡಿ.ಆರ್.ಎಫ್ ತಂಡದ ಸದಸ್ಯರು, ಮತ್ತು ಭಾರತೀಯ ರೆಡ್ ಕ್ರಾಸ್ ತಂಡದ ನಿಸಾರ್ ಅಹಮದ್, ಉಮಾ ಮಹೇಶ್ವರಿ, ಎಂ.ವಲಿ ಬಾಷಾ, ಮಂಜುನಾಥ್ ಸೇರಿದಂತೆ ಗೃಹರಕ್ಷಕದಳ ಸಿಬ್ಬಂದಿ ವರ್ಗ ಸೇರಿದಂತೆ ಸುಮಾರು 200 ಜನ ಗೃಹರಕ್ಷಕರು ಇದ್ದರು.