ಬೆಂಗಳೂರು
ಮನೆ ಕೆಲಸ ಮಾಡು ಎಂದಿದ್ದಕ್ಕೆ ನೊಂದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ದುರ್ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮಡಿವಾಳದ ಚಾಕೋಲೆಟ್ ಕಾರ್ಖಾನೆ ರಸ್ತೆಯ ಮನೆಯೊಂದರಲ್ಲಿ ವಾಸಿಸುತ್ತಿದ್ದ ಪಶ್ಚಿಮಬಂಗಾಳದ ಮೂಲದ ಕುಂಕುಮ್ (20)ಎಂದು ಗುರುತಿಸಲಾಗಿದೆ.ಕುಂಕುಮ್ ಅವರ ಅಕ್ಕ ವಿಪೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ-ತಂಗಿಯನ್ನು ಕರೆದುಕೊಂಡು ಬಂದು ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ದೂರಶಿಕ್ಷಣದಲ್ಲಿ ಬಿಕಾಂ ಮಾಡುತ್ತಿದ್ದ ಕುಂಕುಮ್, ಅವರ ತಾಯಿ ಆಯತಪ್ಪಿ ಬಿದ್ದು ಕಾಲು ಮುರಿದುಕೊಂಡಿದ್ದು, ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದರು. ಅಕ್ಕ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆಕೆಲಸವೆಲ್ಲ ಕುಂಕುಮ್ ಮೇಲೆ ಬಿದ್ದಿತು.
ಇದರಿಂದ ನೊಂದ ಕುಂಕುಮ್, ತನ್ನ ಕೊಠಡಿಗೆ ಮಲಗಲು ಹೋಗಿ ಒಳಗೆ ನೇಣು ಬಿಗಿದುಕೊಂಡಿದ್ದಾರೆ. ರಾತ್ರಿ ಅಕ್ಕ ಕೆಲಸ ಮುಗಿಸಿಕೊಂಡು ಬಂದು ಹಲವು ಬಾರಿ ಕೊಠಡಿ ಬಾಗಿಲು ಬಡಿದಿದ್ದರೂ ತೆಗೆಯದಿದ್ದರಿಂದ ಆತಂಕಗೊಂಡು ಬಾಗಿಲು ಹೊಡೆದು ನೋಡಿದಾಗ ಕುಂಕುಮ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಮಡಿವಾಳ ಪೆಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







