ಬೆಂಗಳೂರು
ಅಧಿಕ ಬಡ್ಡಿ ನೀಡುವುದಾಗಿ ಗ್ರಾಹಕರಿಗೆ ಸಾವಿರಾರು ಕೋಟಿ ರೂ.ವಂಚನೆ ಮಾಡಿದ್ದ ಖತರ್ನಾಕ್ ತಂದೆ-ಮಗ ಸೇರಿ ಮೂವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಬಂಗಾರಪೇಟೆ ಮೂಲದ ಷಣ್ಮುಗ ಮತ್ತು ದಿಲೀಪ್ ಹಾಗೂ ಅವರ ಕಂಪನಿಯ ಮ್ಯಾನೇಜರ್ ನಾಗರಾಜ್ ಬಂಧಿತ ಆರೋಪಿಗಳಾಗಿದ್ದಾರೆ.ಚಿಟ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನೂರಾರು ಕೋಟಿ ವಂಚನೆಮಾಡಿರುವುದು ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ ಆರೋಪಿಗಳ ವಿರುದ್ದ ದಾಖಲಾಗಿವೆ 60 ಕ್ಕೂ ಹೆಚ್ಚು ವಂಚನೆ ಪ್ರಕರಣಗಳಿವೆ.
ಗ್ರಾಹಕರಿಗೆ 1 ಲಕ್ಷ ದಿಂದ 2 ಕೋಟಿರೂ.ವರೆಗೆ ಹೂಡಿಕೆ ಮಾಡಿದ್ದು ಎಲ್ಲರಿಗೂ ವಂಚನೆ ಮಾಡಲಾಗಿದೆ ಶ್ರೀ ಷಣ್ಮುಗ ಪೈನಾನ್ಸ್ ,ಶ್ರೀ ಷಣ್ಮುಗ ಚಿಟ್ಸ್ ಫಂಡ್ಸ್ ಅಂಡ್ ಇನ್ವೆಸ್ಟ್ಮೆಂಟ್, ಆರ್ ಕೆ ಎನ್ ರೈಸ್ ಮಿಲ್, ಶ್ರೀ ಷಣ್ಮುಗ ಮಾರ್ಡನ್ ರೈಸ್ ಮಿಲ್, ಆರ್ ಕೆ ಎನ್ ಇನ್ವೆಸ್ಟ್ ಮೆಂಟ್ ಪ್ರೈ.ಲಿ. ಸೇರಿದಂತೆ ಐದು ಕಂಪೆನಿಗಳನ್ನು ಆರೋಪಿಗಳು ನಡೆಸುತ್ತಿರುವುದು ಪತ್ತೆಯಾಗಿದೆ
ಮೋಸಹೋದವರಲ್ಲಿ ಬಹುಪಾಲು ಸರ್ಕಾರಿ ಅಧಿಕಾರಿಗಳು, ರೈತರು ಉದ್ಯಮಿದಾರರು, ನಿವೃತ್ತ ನೌಕರರಾಗಿದ್ದಾರೆ ಬೆಂಗಳೂರು,ಮಾಲೂರು, ಬಂಗಾರಪೇಟೆ, ಕೋಲಾರ,ಕೆಜಿಎಫ್,ಮುಳುಬಾಗಿಲು,ಸೀಮಾಂದ್ರ,ತಮಿಳುನಾಡಿನ ಹಲವಾರು ಗ್ರಾಹಕರಿಗೆ ವಂಚನೆ ಮಾಡಿರುವುದು ಕಂಡುಬಂದಿದೆ
ಆರೋಪಿಗಳ ವಿರುದ್ದ 60 ಕ್ಕೂ ಹೆಚ್ಚು ಚೆಕ್ ಬೌನ್ಸ್ ಕೇಸ್ ಗಳು ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿವೆ ಹಣ ವಾಪಸ್ ನೀಡುವಂತೆ ಕೇಳಿದರೆ ಬೆದರಿಸಿ,ಧಮ್ಕಿ ಹಾಕುತ್ತಿದ್ದ ಆರೋಪಿಗಳಾದ ಷಣ್ಮುಗ, ಪುತ್ರ ದಿಲೀಪ್‍ಗೆ ಮ್ಯಾನೇಜರ್ ನಾಗರಾಜ್ ಸಹಕಾರ ನೀಡಿರುವುದು ತನಿಖೆಯಲ್ಲಿ ಕಂಡುಬಂದಿದೆ
ಬೆಳ್ಳಂದೂರಿನ ಸತ್ಯನಾರಾಯಣ ಎಂಬಾತನಿಗೆ 5 ಕೋಟಿಗೂ ಹೆಚ್ಚು ಹಣ ವಂಚಿಸಿದ್ದ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದು ಬೆಂಗಳೂರು, ಬಂಗಾರಪೇಟೆ,ಕೆಜಿಎಫ್, ಮುಳುಬಾಗಿಲು ಸೇರಿದಂತೆ ವಿವಿಧ ಠಾಣೆಗಳಲ್ಲಿ ಆರೋಪಿ ವಿರುದ್ದ ಪ್ರಕರಣ ದಾಖಲಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








