ಬ್ಯೂನಸ್ :
ಕಳೆದ ವರ್ಷ ಅಟ್ಲಾಂಟಿಕ್ ಮಹಾಸಾಗರದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ಜಲಾಂತರ್ಗಾಮಿ ನೌಕೆಯ ಅವಶೇಷ ಪತ್ತೆಯಾಗಿವೆ ಎಂದು ಅರ್ಜೆಂಟೀನಾ ನೌಕಾಪಡೆಯ ಮಾಧ್ಯಮ ವಿಭಾಗ ತಿಳಿಸಿದೆ.
ಎಆರ್ಎ ಸ್ಯಾನ್ ಜುವಾನ್ ಎಂಬ ಜಲಾಂತರ್ಗಾಮಿ ನೌಕೆ ಅವಶೇಷಗಳು ಅಟ್ಲಾಂಟಿಕ್ ಸಾಗರದ ಸುಮಾರು 870 ಮೀಟರ್ ಆಳದಲ್ಲಿ ದೊರಕಿವೆ ಎಂದು ಕ್ಯಾಪ್ಟನ್ ಗೇಬ್ರಿಯಲ್ ಅಟ್ಟಿಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ ನೌಕ ನೆಲೆಯಲ್ಲಿ ಸುದ್ದಿ ಘೋಷ್ಟಿಯಲ್ಲಿ ಜುವಾನ್ ಜಲಾಂತರ್ಗಾಮಿ ನೌಕೆಯ ಮೂರು ಪೋಟುಗಳನ್ನು ತೋರಿಸಿದ್ದಾರೆ. ಅಮೆರಿಕಾದ ಕಂಪನಿಯೊಂದು ಇದನ್ನು ಪತ್ತೆ ಹಚ್ಚಿದ್ದು, ನೌಕೆಯ ಪರಿಸ್ಥಿತಿ ಅಸ್ಪಷ್ಟವಾಗಿಯೇ ಇದೆ. ಮುಳುಗಿದ ಜಲಾಂತರ್ಗಾಮಿ ನೌಕೆಯನ್ನು ಪತ್ತೆ ಹಚ್ಚಲು ಅರ್ಜೆಂಟೀನಾಕ್ಕೆ ಸಾಧ್ಯವಾಗಿರಲಿಲ್ಲ ಎಂದು ರಕ್ಷಣಾ ಸಚಿವ ಅಸ್ಕರ್ ಅಕ್ವಾಡ್ ಹೇಳಿಕೆ ನೀಡಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








