ಚಿತ್ರದುರ್ಗ
ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರಸ್ತುತಜಾರಿಯಲ್ಲಿರುವ ವಿದ್ಯಾಸಿರಿ ಯೋಜನೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್. ಕೃಷ್ಣಮೂರ್ತಿ ಅವರು ಹೇಳಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾಸ್ಟೆಲ್‍ಗಳಲ್ಲಿ ಪ್ರವೇಶ ದೊರೆಯದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸುಮಾರು 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದು, ಇರುವ ಹಾಸ್ಟೆಲ್‍ಗಳಲ್ಲಿಯೇ ಹೆಚ್ಚುವರಿಯಾಗಿಇವರಿಗೆದಾಖಲಾತಿ ನೀಡಿ, ನಿರ್ವಹಣೆ ಮಾಡುತ್ತಿರುವುದನ್ನುತಮ್ಮಜಿಲ್ಲೆಯ ಪ್ರವಾಸ ಸಂದರ್ಭದಲ್ಲಿ ಹಾಸ್ಟೆಲ್‍ಗಳಿಗೆ ಭೇಟಿ ನೀಡಿದಾಗಕಂಡುಬಂದಿದೆ. ಪ್ರತಿ ಹಾಸ್ಟೆಲ್‍ಗಳಲ್ಲಿ ಕನಿಷ್ಠ 50 ರಿಂದ 60 ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶಕಲ್ಪಿಸಲಾಗಿದೆ.ಇರುವಕಟ್ಟಡದಲ್ಲಿಯೇ ಹೆಚ್ಚುವರಿ ವಿದ್ಯಾರ್ಥಿಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆಎಂದುಆಯೋಗದ ಸದಸ್ಯ ಶಿವಶಂಕರ್ ಅವರು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್‍ಅವರು, ಮಂಜೂರಾತಿ ಸಂಖ್ಯೆಗಿಂತಲೂ ಹೆಚ್ಚು ಮಕ್ಕಳು ಬಂದರೂ, ಅವರಿಗೆ ಪ್ರವೇಶ ನೀಡುವಂತೆ ಸರ್ಕಾರ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ಹೆಚ್ಚುವರಿ ವಿದ್ಯಾರ್ಥಿಗಳು ಹಾಸ್ಟೆಲ್‍ಗಳಲ್ಲಿ ಇದ್ದಾರೆ.ಅವರಿಗೂ ಸೂಕ್ತ ವ್ಯವಸ್ಥೆಕಲ್ಪಿಸಲಾಗಿದೆಎಂದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ, ಇದು ತುಸು ಕಷ್ಟದಾಯಕವಾಗಿದ್ದರೂ, ಸರ್ಕಾರದ ನಿರ್ದೇಶನ ಪಾಲಿಸಲಾಗುತ್ತಿದೆ . ಹಾಸ್ಟೆಲ್‍ಗಳಲ್ಲಿ ಪ್ರವೇಶದೊರಕದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದ ವಿದ್ಯಾಸಿರಿ ಯೋಜನೆಯಡಿ ಪ್ರತಿ ವರ್ಷ 15 ಸಾವಿರರೂ.ಸಹಾಯಧನ ನೀಡಲಾಗುತ್ತಿದೆ .ಇದೇ ಯೋಜನೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಿಸಿದಲ್ಲಿ, ಅನುಕೂಲವಾಗಲಿದೆಎಂದು ಸಲಹೆ ನೀಡಿದರು.ಇದಕ್ಕೆ ಸ್ಪಂದಿಸಿದ ಆಯೋಗದಅಧ್ಯಕ್ಷರು, ಇದೊಂದುಉತ್ತಮವಾದ ಸಲಹೆಯಾಗಿದ್ದು, ನ. 27 ರಂದು ಬೆಂಗಳೂರಿನ ಜರುಗುವರಾಜ್ಯ ಮಟ್ಟದ ಸಭೆಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದುಎಂದರು.
ಜಿಲ್ಲೆಯಲ್ಲಿನ ನಿರ್ವಹಣೆಗೆ ಮೆಚ್ಚುಗೆ :ಕರ್ನಾಟಕರಾಜ್ಯಆಹಾರಆಯೋಗವು ಈಗಾಗಲೆ 13 ಜಿಲ್ಲೆಗಳಲ್ಲಿ ಪ್ರವಾಸಕೈಗೊಂಡು, ಅಲ್ಲಿನ ಹಾಸ್ಟೆಲ್‍ಗಳು, ಅಂಗನವಾಡಿ ಕೇಂದ್ರಗಳು, ನ್ಯಾಯಬೆಲೆ ಅಂಗಡಿಗಳು, ಆಹಾರ ಗೋಧಾಮುಗಳನ್ನು ಪರಿಶೀಲಿಸಿದ್ದು, ಈ ಎಲ್ಲ ಜಿಲ್ಲೆಗಳಲ್ಲಿನ ಆಹಾರ, ನಾಗರಿಕ ಸರಬರಾಜು ವ್ಯವಸ್ಥೆಯ ನಿರ್ವಹಣೆಗಿಂತಲೂ, ಚಿತ್ರದುರ್ಗಜಿಲ್ಲೆಯಲ್ಲಿನ ವ್ಯವಸ್ಥೆ ನಿರ್ವಹಣೆ ಉತ್ತಮವಾಗಿದೆ ಎಂದು ಆಯೋಗದ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ನ. 22 ಮತ್ತು 23 ರಂದುಎರಡು ದಿನಗಳ ಕಾಲ ಆಯೋಗವುಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಂಗನವಾಡಿ ಕೇಂದ್ರಗಳು, ಹಾಸ್ಟೆಲ್‍ಗಳ ನಿರ್ವಹಣೆಉತ್ತಮವಾಗಿದೆ.ಆದಾಗ್ಯೂ ಕೆಲವೊಂದು ಸಣ್ಣ ಪುಟ್ಟ ನ್ಯೂನತೆಗಳು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಲುಆಯೋಗವು ಅಧಿಕಾರಿಗಳಿಗೆ ಸೂಚನೆ ನೀಡಿತು.
ತೂಕದ ಯಂತ್ರಗಳನ್ನು ಪರಿಶೀಲಿಸಿ :ಜಿಲ್ಲೆಯ ಶೇ. 98 ರಷ್ಟು ನ್ಯಾಯಬೆಲೆ ಅಂಗಡಿಗಳಲ್ಲಿ ಡಿಜಿಟಲ್‍ತೂಕದ ಯಂತ್ರಗಳನ್ನು ಬಳಸಲಾಗುತ್ತಿದೆ.ಕೆಲವೆಡೆ ಯಂತ್ರಗಳಿಗೆ ಕಾನೂನು ಮಾಪನಇಲಾಖೆಯಿಂದಅಧಿಕೃತ ಮುದ್ರೆ ಹಾಕದಿರುವುದು ಕಂಡುಬಂದಿದೆ . ಇಲಾಖೆಯ ಅಧಿಕಾರಿ , ಸಿಬ್ಬಂದಿಗಳು ಜಿಲ್ಲೆಯಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು . ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ರೀತ್ಯಕ್ರಮ ವಹಿಸಬೇಕು ಎಂದು ಆಯೋಗದ ಸದಸ್ಯಡಿ.ಜಿ. ಹಸಬಿ ನಿರ್ದೇಶನ ನೀಡಿದರು.
ಜಪ್ತಿ ಮಾಡಿದಆಹಾರಧಾನ್ಯ ವಿಲೇವಾರಿ :ಅಕ್ರಮ ಪ್ರಕರಣಗಳಲ್ಲಿ ಆಹಾರ ಇಲಾಖೆ ಜಪ್ತಿ ಮಾಡಿರುವರಾಗಿ, ಅಕ್ಕಿ, ಗೋಧಿ ಸೇರಿದಂತೆ ವಿವಿಧಆಹಾರ ಧಾನ್ಯಗಳು ಜಿಲ್ಲೆಯ ಗೋದಾಮುಗಳಲ್ಲಿ ಇರುವುದುಕಂಡುಬಂದಿದ್ದು, ಸುಮಾರುಒಂದರಿಂದಎರಡು ವರ್ಷಗಳಷ್ಟು ಹಳೆಯ ಧಾನ್ಯಗಳು ಸಂಗ್ರಹವಾಗಿವೆ. ಇವುಗಳನ್ನು ವಿಲೇವಾರಿ ಮಾಡದಕ್ರಮಕ್ಕೆಆಯೋಗದ ಸದಸ್ಯ ಶಿವಶಂಕರ್ ಅವರು ಆಕ್ಷೇಪಿಸಿದರು . ಇದಕ್ಕೆ ಉತ್ತರಿಸಿದ ಆಹಾರ ಇಲಾಖೆ ಉಪನಿರ್ದೇಶಕ ಮಧುಸೂಧನ್‍ಅವರು, ಈ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ, ವಿಲೇವಾರಿಯಾಗಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಶಿವಶಂಕರ್ ಅವರು, ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದರೂ, ಆಹಾರವನ್ನು ಹೆಚ್ಚು ಕಾಲ ದಾಸ್ತಾನುಇಡುವಅಗತ್ಯವಿಲ್ಲ.ಇಲ್ಲದಿದ್ದಲ್ಲಿಆಹಾರ ಹಾಳಾಗುವ ಸಾಧ್ಯತೆಇರುತ್ತದೆ.ಇಂತಹ ಪ್ರಕರಣಗಳಲ್ಲಿ ವಿಲೇವಾರಿ ಮಾಡಲು ಸರ್ಕಾರದ ಮಾರ್ಗಸೂಚಿಇದೆ.ಕೂಡಲೆ ಮಾರ್ಗಸೂಚಿಯಂತೆದಾಸ್ತಾನುಆಹಾರಧಾನ್ಯ ಸಾಮಗ್ರಿಯನ್ನು ವಿಲೇವಾರಿ ಮಾಡಲು ಸಲಹೆ ನೀಡಿದರು.
ಅಪೌಷ್ಠಿಕ ಮಕ್ಕಳು :ಜಿಲ್ಲೆಯಲ್ಲಿ ಸದ್ಯ 17410 ಮಕ್ಕಳಲ್ಲಿ ಸಾಧಾರಣ ಅಪೌಷ್ಠಿಕತೆ ಹಾಗೂ 448 ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆಇದ್ದು, ಇಂತಹ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಹಾಗೂ ಚಿಕಿತ್ಸೆ ಕೊಡಿಸಿದ್ದು, ಈ ಪೈಕಿ 175 ಮಕ್ಕಳು ಸಾಮಾನ್ಯ ಸ್ಥಿತಿಗೆ ಮರಳಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ತಿಳಿಸಿದರು. ಆಯೋಗವುಜಿಲ್ಲಾಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಪೌಷ್ಠಿಕ ಮಕ್ಕಳ ಚಿಕಿತ್ಸೆಗೆದಾಖಲಾಗುವ ಪೋಷಕರಿಗೆ ದಿನಕ್ಕೆ 236 ರೂ.ಭತ್ಯೆ ನೀಡಬೇಕಿದ್ದು, ಕೇವಲ 175 ರೂ.ನೀಡುತ್ತಿರುವುದುಕಂಡುಬಂದಿದೆ.ಅಲ್ಲದೆ ಮಕ್ಕಳ ಚಿಕಿತ್ಸೆ ಪೂರ್ಣಗೊಳ್ಳದೆ ಅರ್ಧಕ್ಕೆ ಹಿಂದಿರಿಗಿರುವುದು ಗಮನಕ್ಕೆ ಬಂದಿದೆ ಎಂದು ಆಯೋಗದ ಸದಸ್ಯೆ ಮಂಜುಳಾಬಾಯಿ ಹೇಳಿದರು.ಪೋಷಕರಿಗೆ ನೀಡುವ ಭತ್ಯೆಕುರಿತು ಪರಿಶೀಲಿಸಿ, ನಿಯಮಾನುಸಾರ ನೀಡಲಾಗುವುದು .
ತೀವ್ರ ಅಪೌಷ್ಠಿಕ ಮಕ್ಕಳನ್ನು ಚಿಕಿತ್ಸೆಗೆಕರೆತರುವ ಪೋಷಕರು, 15 ದಿನಗಳ ಕಾಲ ಆಸ್ಪತ್ರೆಯಲ್ಲಿಇರಬೇಕಾಗುತ್ತದೆ. ಆದರೆ ವಿವಿಧ ಸಬೂಬು ಹೇಳಿ, ಮಕ್ಕಳನ್ನು ವಾಪಸ್‍ಕರೆದುಕೊಂಡು ಹೋಗುತ್ತಾರೆ.ಹೀಗಾಗಿ ಮಕ್ಕಳ ಚಿಕಿತ್ಸೆ ಪೂರ್ಣವಾಗುತ್ತಿಲ್ಲ.ಪೋಷಕರುಕೂಡಚಿಕಿತ್ಸೆಗೆ ಸಹಕರಿಸಬೇಕಾಗುತ್ತದೆ.ಮುಂದೆ, ಈ ರೀತಿಆಗದಂತೆಎಚ್ಚರಿಕೆ ವಹಿಸಲಾಗುವುದುಎಂದುಜಿಲ್ಲಾ ಸರ್ಜನ್‍ಡಾ.ಜಯಪ್ರಕಾಶ್‍ಅವರು ಹೇಳಿದರು. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆಅಂಗನವಾಡಿಕಾರ್ಯಕರ್ತೆಯರು, ಮೇಲ್ವಿಚಾರಕರು, ಬಾಲವಿಕಾಸ ಸಮಿತಿಯವರು ಸೂಕ್ತ ಜಾಗೃತಿ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಮಹಮ್ಮದ್ ಅಲಿ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಪಿ.ಎನ್. ರವೀಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂಧನ್, ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಡಾ. ಬಿ.ವಿ. ನೀರಜ್, ಉಪವಿಭಾಗಾಧಿಕಾರಿ ವಿಜಯಕುಮಾರ್, ಐಎಎಸ್ ಪ್ರೊಬೆಷನರಿ ಅಧಿಕಾರಿ ಡಾ.ನಂದಿನಿದೇವಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
