ಮಧುಗಿರಿ
ಪೊಲೀಸ್ ಪೇದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣದ ಹಿನ್ನೆಲೆಯಲ್ಲಿ ತಾಲ್ಲೂಕಿನ ಪಿಡಿಓ ಒಬ್ಬನನ್ನು ಸಿಸಿಬಿ ಪೊಲೀಸರು ಗುರುವಾರ ಮಧ್ಯಾಹ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಪಟ್ಟಣದ 15ನೆ ವಾರ್ಡಿನ ವಾಸಿ ಆರೋಪಿ ಮಹೇಶ್ ಹಾಲಿ ಗೊಂದಿಹಳ್ಳಿಯ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಪೇದೆಯ ಪರೀಕ್ಷೆ ಪ್ರಶ್ನೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈತ ತನ್ನ ಸಂಬಂಧಿಕರೊಬ್ಬರಿಗೆ ಪ್ರಶ್ನೆ ಪತ್ರಿಕೆಯನ್ನು ಬೇರೊಬ್ಬರಿಂದ ಕೊಡಿಸಿದ್ದ ಎನ್ನಲಾಗುತ್ತಿದೆ.
ಈತನ ಶೋಧನೆಗಾಗಿ ಮಧುಗಿರಿಯ ತಾಪಂ ಸೇರಿದಂತೆ ಮತ್ತಿರ ಕಡೆ ಶೋಧ ಕಾರ್ಯ ನಡೆಸಿದ್ದರು. ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಆದರೆ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳು ಇನ್ನೂ ಘಟನೆಯ ಬಗ್ಗೆ ಖಚಿತ ಪಡಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
