ಲೆಕ್ಕವೇ ಸಿಗದ 35 ಸಾವಿರ ಕೋಟಿಗೆ ಲೆಕ್ಕ ಕೇಳ್ತಿವಿ

ದಾವಣಗೆರೆ

        ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಮಾಡಲಾಗಿರುವ 35 ಸಾವಿರ ಕೋಟಿ ರೂ. ವೆಚ್ಚದ ಬಗ್ಗೆ ಲೆಕ್ಕವೇ ಸಿಗದ ಬಗ್ಗೆ ಅ.10ರಿಂದ ಆರಂಭವಾಗಲಿರುವ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಸಿಎಜಿ ವರದಿ ಆಧರಿಸಿ ಲೆಕ್ಕ ಕೆಳಲಿದೆ ಎಂದು ಮಾಜಿ ಸಚಿವ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.

       ನಗರದ ಹೈಸ್ಕೂಲ್ ಮೈದಾನದಲ್ಲಿನ ಟೆನಿಸ್ ಕೋರ್ಟ್‍ನಲ್ಲಿ ಕಳೆದ 2 ದಿನಗಳಿಂದ ನಡೆಯುತ್ತಿರುವ ನಡೆಯುತ್ತಿರುವ ರಾಜ್ಯಮಟ್ಟದ ಆಹ್ವಾನಿತ ಟೆನ್ನಿಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ 35 ಸಾವಿರ ಕೋಟಿ ಹಣವನ್ನು ಕೇವಲ 35 ರೂ.ಗಳಂತೆ ಭಾವಿಸಿದಂತಿದೆ. ಆದರೆ, ಬಿಜೆಪಿ ಇದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಿ ಲೆಕ್ಕ ಕೇಳುತ್ತೇವೆ ಎಂದರು.

        35 ರೂಪಾಯಿಗಳ ಲೆಕ್ಕ ಸಿಗದಿದ್ದರೆ, ಯಾರೋ ಬೀಡಿ ಗೀಡಿ ಸೇದಿರಬಹುದು ಎಂದುಕೊಳ್ಳಬಹುದು. ಆದರೆ, ಇದು 35 ಸಾವಿರ ಕೋಟಿ ರೂ. ವಿಚಾರ. ಇಷ್ಟು ಹಣ ಎಲ್ಲಿಗೆ ಹೋಯಿತೆಂಬುದು ಜನತೆಗೂ ಗೊತ್ತಾಗಬೇಕಿದೆ. ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವ 35 ಸಾವಿರ ಕೋಟಿ ಹಣ ಎಲ್ಲಿ ಹೋಯಿತೆಂಬ ಬಗ್ಗೆ ಗೊತ್ತಾಗಬೇಕು. ಈ ಹಣ ಬಿಜೆಪಿಯದ್ದಾಗಲೀ, ಕಾಂಗ್ರೆಸ್ಸಿನದ್ದಾಗಲೀ ಅಥವಾ ಜೆಡಿಎಸ್ ಪಕ್ಷದ್ದಾಗಲೀ ಅಲ್ಲ. ಇದೆಲ್ಲಾ ನಾಡಿನ ಜನತೆ ತೆರಿಗೆ ರೂಪದಲ್ಲಿ ಕಟ್ಟಿದ್ದ ಹಣ ಎಂದು ಹೇಳಿದರು.

          ಬೆಳಗಾವಿ ಅಧಿವೇಶನದಲ್ಲಿ ಜನರ ಬದುಕಿನ ಸಮಸ್ಯೆ, ಬರ, ಅತಿವೃಷ್ಟಿ, ಸಾಲ ಮನ್ನಾ ಗೊಂದಲ, ಕಬ್ಬಿನ ಬಾಕಿ, ಆಡಳಿತ ವೈಫಲ್ಯದ ಬಗ್ಗೆಯೂ ನಮ್ಮ ಪಕ್ಷ ಹೋರಾಟ ನಡೆಸಲಿದೆ ಎಂದರು.

         ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಬಿಜೆಪಿ ಕೈ ಹಾಕಲ್ಲ. ಸರ್ಕಾರವನ್ನು ಉಳಿಸುವ ಕೆಲಸವೂ ನಮ್ಮದಲ್ಲ . ನಮ್ಮದು ಯಾವ ಆಫರೇಷನ್ ಕಮಲವೂ ಇಲ್ಲ. ಸರ್ಕಾರವನ್ನು ನಮ್ಮ ಪಕ್ಷದ ಬೆಂಬಲದಲ್ಲಿ ಅಧಿಕಾರಕ್ಕೆ ತಂದಿಲ್ಲ. ಸರ್ಕಾರವನ್ನು ಉಳಿಸಿಕೊಳ್ಳುವುದು, ಬಿಡುವುದು ಆ ಪಕ್ಷಗಳಿಗೆ ಬಿಟ್ಟ ವಿಚಾರ ಎಂದರು.

           ಕೆಲ ಬಿಜೆಪಿ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ಬರುತ್ತಾರೆ ಅಂತಾ ಹೇಳುತ್ತಾರೆ. ಆದರೆ, ಗಟ್ಟಿ ಇದ್ದವರೂ ಮಾತ್ರ ಬಿಜೆಪಿಯಲ್ಲಿ ಉಳಿದುಕೊಳ್ಳುತ್ತಾರೆ. ಜೊಳ್ಳು ಇರುವವರು ಹೋಗ್ತಾರೆ. ನಾವು ನಮ್ಮ ಸಿದ್ಧಾಂತದ ಮೇಲೆ ಅಧಿಕಾರ ಮಾಡುವವರು. ಹಾಗಾಗಿ ಬಿಜೆಪಿಯವರು ಯಾರು ಕೂಡ ಬೇರೆ ಪಕ್ಷಗಳ ಕಡೆ ಹೋಗಲ್ಲ. ನಮ್ಮನ್ನು ಬಿಟ್ಟು ಹೋದ ಬೇಳೂರು ಗೋಪಾಲಕೃಷ್ಣ ಅವರ ಸ್ಥಾನ ಏನು? ಅವರ ಸ್ಥಾನಮಾನದ ಬಗ್ಗೆ ಗೊತ್ತಿಲ್ಲ. ಅವರ ಮಾವ ಕಾಗೋಡು ತಿಮ್ಮಪ್ಪ ಅವರನ್ನ ಕೇಳಿದರೆ ಅವನು ಬಂದಿದ್ರಿಂದಾನೇ, ನಾ ಹಾಳಾಗೋದೆ.

        ಅವನು ಬಂದ ಮೇಲೆ ನಾ ಸೋತೆ ಎನ್ನುತ್ತಾರೆ. ಇದು ನನ್ನ ಮಾತಲ್ಲ. ಕಾಗೋಡೇ ಸ್ವತಃ ಹೇಳಿರೋದು ಎಂದರು.ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಅವರ ಮಾತಿನಂತೆ ಎಲ್ಲರ ಸಾಲ ಮನ್ನಾ ಮಾಡಲಿ. ಅವರು ಸ್ತ್ರೀಶಕ್ತಿ ಸಂಘ, ಸ್ವಸಹಾಯ ಸಂಘಗಳು ಅಲ್ಲದೇ ಖಾಸಗಿ ಲೇವಾದೇವಿದಾರರ ಸಾಲಮನ್ನಾ ಕೂಡ ಮಾಡಲಿ. ಈ ಮಾತನ್ನು ಸಿ.ಎಂ. ಆಗುವ ಮೊದಲು ಪ್ರಮಾಣವಚನ ಸ್ವೀಕರಿಸುವ ಮುನ್ನ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ದರ್ಶನ ಮಾಡಿ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟ ಮಾತು ಎಂದರು.

        ಅವರು ಹೇಳಿದ ಮಾತನ್ನು ಮರೆತಿರಬಹುದು. ಏಕೆಂದರೆ ರಾಜಕಾರಣಿಗಳಿಗೆ ಮರೆವು ಸಾಮಾನ್ಯ. ಹಾಗಾಗಿ ತಮ್ಮ ಮೂಲಕ ಪುನಹ ನೆನಪಿಸುವ ಕೆಲಸ ಮಾಡುತ್ತಿರುತ್ತೇವೆ. ಹಾಗಾಗಿ ಮಾಧ್ಯಮದವರು ಯಾರು ನೆನೆಪು ಮಾಡಿದರೆ ಅವರ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾರೆ. ನಾವು ಮಾಡಿದರೆ ನಮ್ಮ ಮೇಲೂ ಕೋಪ ಮಾಡಿಕೊಳ್ಳುತ್ತಾರೆ. ಕೇಂದ್ರದಿಂದ ಅನುದಾನ ಬಂದಿದೆ ಎಂದರೆ ಸಂಸದರ ಮೇಲೂ ಸಿಟ್ಟು ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

        ರೈತರು ಯಾರಾದರೂ ಹೋರಾಟ ಮಾಡುತ್ತಿದ್ದರೆ ಆ ರೈತರ ಮಹಿಳೆಯರ ಬಗ್ಗೆ ನೀ ಎಲ್ಲಿ ಮಲಗಿದ್ಯವ್ವ ಎಂದು ಕೇಳುತ್ತಾರೆ. ಈಗ ಆ ಹೆಣ್ಣು ಮಗಳಿಗೆ ಆ ರೀತಿ ಕೇಳಿದ್ದಾರೆ. ಆದರೆ, ಇವರು ಎಲ್ಲಿ ಮಲಗಿದ್ದರೂ ಎಂಬುದು ಗೊತ್ತಾದರೆ ಇಡೀ ರಾಜ್ಯದಲ್ಲಿ ಯಾವ ಗೌರವ ಕೂಡ ಉಳಿಯುವುದಿಲ್ಲ ಎಂದು ವ್ಯಂಗ್ಯವಾಡಿದರು.

           ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಅಧ್ಯಕ್ಷ ಜಯಪ್ರಕಾಶ ಅಂಬರಕರ್, ನಿವೃತ್ತ ಪೆÇಲೀಸ್ ಅಧೀಕ್ಷಕ ಕೆ.ಪಿ.ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link