ನವದೆಹಲಿ:
ಬ್ಯಾಂಕ್ ಖಾತೆ ಆಯಿತು ಗ್ಯಾಸ್ ಗೆ ಆಧಾರ್ ಲಿಂಕಿಂಗ್ ಮಾಡಿದ್ದು ಆಯಿತು ಈಗ ನಮ್ಮ ವೋಟರ್ ಐಡಿಗೂ ಆಧಾರ್ ಲಿಂಕ್ ಮಾಡಿ ಎಂದು ಕೇಂದ್ರ ಆದೇಶ ನೀಡಲಿದೇ ಎಂಬ ಮಾಹಿತಿ ಲಭ್ಯವಾಗಿದೆ ಏಕೆಂದರೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಮಾತ್ರ ಸಂಯೋಜಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ಆದೇಶದ ಬೆನ್ನಲ್ಲೇ ಚುನಾವಣಾ ಆಯೋಗವು, ಮತದಾರರ ಗುರುತಿನ ಚೀಟಿಯನ್ನು ಆಧಾರ್ ಜೊತೆ ಸಂಯೋಜಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಇದಕ್ಕಾಗಿ ಜನಪ್ರತಿನಿಧಿ ಕಾಯ್ದೆ-1951 ತಿದ್ದುಪಡಿ ಆಗಬೇಕಿದ್ದು, ಕಾನೂನು ಸಚಿವಾಲಯಕ್ಕೆ ಈ ಪ್ರಸ್ತಾಪವನ್ನು ರವಾನಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








