ಕೊಟ್ಟೂರು

ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದ ಎರಡನೇ ವಾರ್ಡನಲ್ಲಿ ಚರಂಡಿ ನೀರು ರಸ್ತೆಗೆ ಹರಿಯುವುದರಿಂದ ಜನರು ಓಡಾಡುವುದು ಕಷ್ಟವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಲುಷಿತ ನೀರಿನಿಂದಾಗಿ ದುರ್ವಾಸನೆ ಬರುತ್ತಿದ್ದು, ಸೊಳ್ಳೆಗಳು ಜೇನು ನೋಣದಂತೆ ಜನರನ್ನು ಮುತ್ತುತ್ತವೆ. ಇದರಿಂದಾಗಿ ಡೆಂಗ್ಯೂ ಜ್ವರ ಹರಡುವ ಭೀತಿಯಲ್ಲಿ ಆ ವಾರ್ಡನ ಜನರಿದ್ದಾರೆ.
ಕೊಟ್ಟೂರಿನಿಂದ ಹರಿದು ಬರುವ ಮಳೆ ನೀರು ಹ್ಯಾಳ್ಯಾ ಮಾರ್ಗವಾಗಿ ಮುಂದೆ ಹಾದು ಹೋಗಲು ಲೋಕೋಪಯೋಗಿ ಇಲಾಖೆ ಬೃಹತ್ ಪೈಪ್‍ನ್ನು ಚರಂಡಿಗೆ ಅಳಡಿಸಲು 11 ಪೈಪ್‍ಗಳನ್ನು ಇಲ್ಲಿ ಹಾಕಿ ಒಂದೂವರೆ ವರ್ಷವಾಗಿದ್ದು, ಇತ್ತ ತಿರುಗಿಯೂ ನೋಡಿಲ್ಲ ಎಂದು ಗ್ರಾಮಸ್ಥರು ಅರೋಪಿಸಿದ್ದಾರೆ.
ಪೈಪ್‍ಗಳನ್ನು ಹಾಕಿ, ಚರಂಡಿ ನಿರ್ಮಿಸದಿರುವುದರಿಂದ ಹ್ಯಾಳ್ಯಾದ ಎರಡನೇ ವಾರ್ಡನ ಮನೆಗಳ ನೀರು, ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿರುವುದರಿಂದ ನೀರು ನಿಂತು, ಕಲುಷಿತಗೊಂಡು ದುರ್ವಾಸನೆ ಹಾಗೂ ಸೊಳ್ಳೆಗಳ ತಾಣವಾಗಿದೆ.
ಚರಂಡಿ ನಿರ್ಮಿಸಲು ಗ್ರಾಮಸ್ಥರು ಹಲವು ಸಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದರೂ, ಚರಂಡಿ ಮಾತ್ರ ನಿರ್ಮಾಣವಾಗಿಲ್ಲ. ನಮ್ಮ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ಲೋಕೋಪಯೋಗಿ ಇಲಾಖೆ ನೀಡುತ್ತಿಲ್ಲವೆಂಬುದು ಗ್ರಾಮಸ್ಥರ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
