4 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ: 6 ಕ್ಷೇತ್ರಗಳಿಗೆ ಚುನಾವಣೆ

ಹೊಸಪೇಟೆ:

        ಒಂದೆಡೆ ಬಳ್ಳಾರಿ ಉಪಚುನಾವಣೆಗೆ ದಿನಗಣಗೆ ಆರಂಭವಾಗಿದ್ದರೆ, ಇತ್ತ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಬಿ.ಡಿ.ಸಿ.ಸಿ.) ನಿರ್ದೇಶಕರ ಸ್ಥಾನಗಳಿಗೆ ಐದು ವರ್ಷದ ಅವಧಿಗೆ ಬುಧವಾರ ಚುನಾವಣೆ ನಡೆಯಿತು.

       ಒಟ್ಟು 10 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾದರೆ, ಉಳಿದಂತೆ 6 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯಿತು.

ಅವಿರೋಧ ಆಯ್ಕೆ:

       ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರಕ್ಕೆ ಹೂವಿನಹಡಗಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಪಿ. ರವೀಂದ್ರ, ಬಳ್ಳಾರಿ ಕ್ಷೇತ್ರದಿಂದ ಭೂಗಾರೆಡ್ಡಿ, ಹಗರಿಬೊಮ್ಮನಹಳ್ಳಿ ರವೀಂದ್ರನಾಥ ಹಾಗೂ ಸಂಡೂರು ಕ್ಷೇತ್ರದಿಂದ ವೃಷಭೇಂದ್ರಯ್ಯ ಅವಿರೋಧ ಆಯ್ಕೆಯಾಗಿದ್ದಾರೆ.

ಚುನಾವಣೆ:

      ಸಿರುಗುಪ್ಪ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚೊಕ್ಕ ಬಸವನಗೌಡ ವಿರುದ್ಧ ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ ಗೆಲುವು ಸಾಧಿಸಿದ್ದಾರೆ. ಹೊಸಪೇಟೆ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅನಿಲ್ ಜೋಷಿ ವಿರುದ್ಧ ಎಲ್.ಎಸ್.ಆನಂದ ಜಯ ಗಳಿಸಿದ್ದರೆ, ಕೂಡ್ಲಿಗಿ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೆ.ಕೊಟ್ರೇಶ್ ವಿರುದ್ಧ ಕೆ.ತಿಪ್ಪೇಸ್ವಾಮಿ ಗೆಲುವು ಸಾಧಿಸಿದ್ದಾರೆ.

        ತಾಲೂಕು ವ್ಯವಸಾಯ ಉತ್ಪನ್ನ ಮಾರಾಟಗಾರರ ಸಹಕಾರ ಸಂಘಕ್ಕೆ ಗುಜ್ಜಲ ಹುಲಗಪ್ಪ ವಿರುದ್ಧ ಕೆ.ಎಂ.ಗಂಗಾಧರ ಜಯ ಗಳಿಸಿದ್ದರೆ, ಪಟ್ಟಣ ಬ್ಯಾಂಕ್ ಮತ್ತು ಪತ್ತಿನ ಸಹಕಾರ ಸಂಘಗಳಿಗೆ ಟಿ.ಶಿವಚರಣ ವಿರುದ್ಧ ಕೋಳೂರು ಮಲ್ಲಿಕಾರ್ಜುನಗೌಡ ಗೆಲುವು ಸಾಧಿಸಿದ್ದಾರೆ.

       ಇತರೆ ಸಹಕಾರ ಸಂಘದ ಕ್ಷೇತ್ರಗಳಿಂದ ಪಿ.ಗಾದೆಪ್ಪ ಹಾಗೂ ಹನುಮಂತಪ್ಪ ವಿರುದ್ಧ ಎಂ ಗುರುಸಿದ್ದನಗೌಡ ಜಯಗಳಿಸಿದ್ದಾರೆ ಎಂದು ತಹಶೀಲ್ದಾರ ಹಾಗೂ ಚುನಾವಣೆ ರಿಟರ್ನಿಂಗ್ ಅಧಿಕಾರಿ ಬಿ.ವಿ.ಗಿರೇಶ್ ಬಾಬು ತಿಳಿಸಿದ್ದಾರೆ. ಈ ವೇಳೆ ಸಹಾಯಕ ರಿಟರ್ನಿಂಗ್ ಅಧಿಕಾರಿ ಲಿಯಾಕತ್ ಅಲಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link