ಮೇಲ್ಸೇತುವೆಯಲ್ಲಿ 4 ಅಡಿ ಗುಂಡಿ….!!!!

ನವದೆಹಲಿ:
           ಸದಾ ಟ್ರಾಫಿಕ್ ಜಾಮ್ ನಿಂದ ತುಂಬಿರುವ ದೆಹಲಿಯಲ್ಲಿ ನೊಯಂತ್ರಣಕ್ಕೆ ಸಿಗದಂತೆ ಬೆಳೆದ ಟ್ರಾಫಿಕ್ ಒಂದು ಕಡೆಯಾದರೆ ಸರ್ಕಾರ ನಿರ್ಮಿಸುವ ಕಳಪೆ ಫ್ಲೈವೋವರ್ ಇನ್ನೊಂದು ಕಡೆ ಇನ್ನು ನಿರ್ಮಾಣವಾಗಿ ಕೆವಲ ಒಂದು ವರ್ಷವೂ ಆಗಿಲ್ಲ ಆಗಲೆ ಫ್ಲೈವೋವರ್ ನಲ್ಲಿ 4 ಅಡಿ ಉದ್ದದ ಗುಂಡಿ ಬಿದ್ದಿದೆ ಇದರಿಂದಾಗಿ ಜನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ ಇದರಿಂದ ಪೊಲೀಸರಿಗೆ ಜನರನ್ನು ಸಂಭಾಳಿಸುವುದೆ ದೊಡ್ಡ ತಲೆನೋವಾಗಿದೆ.
          ಮೇಲ್ಸೇತುವೆ ಲೋಕಾರ್ಪಣೆಯಾಗಿ ಒಂದು ವರ್ಷದೊಳಗೆ ಸೇತುವೆಯಲ್ಲಿ ಈ ಪರಿಯ ಗುಂಡಿ ಕಾಣಿಸಿಕೊಂಡು ಜನರನ್ನು ಹೈರಾಣು ಮಾಡಿದೆ.  ಖೆರ್ಕಿ ಡೌಲಾ ಟೋಲ್ ಪ್ಲಾಜಾ ಮತ್ತು ಐಎಮ್ ಟಿ ಮಾನೇಸರ್ ನಡುವಿನ ಸಂಪರ್ಕ ಸೇತುವೆ ಇದಾಗಿದ್ದು, ಕುಳಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 8ರಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಜನ ಕಷ್ಟ ಪಡುವಂತಾಗಿದೆ ಎಂದು ಸಾರ್ವಜನಿಕರು ಆಪ್ ಸರ್ಕಾವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.  
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link