ಬೋಡ್ಕನ ಕಾಲಿಗೆ ಗುಂಡು….!!!

ಬೆಂಗಳೂರು

        ಗ್ಯಾಂಗ್ ಕಟ್ಟಿಕೊಂಡು ಕಾರಿನಲ್ಲಿ ಹೋಗುತ್ತಿದ್ದ ಎದುರಾಳಿಯನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ ಕುಖ್ಯಾತ ರೌಡಿ ಸೈಯದ್ ವಸೀಂ ಅಲಿಯಾಸ್ ಬೋಡ್ಕನ ಕಾಲಿಗೆ ಬ್ಯಾಟರಾಯನಪುರ ಪೊಲೀಸರು ಗುಂಡು ಹೊಡೆದಿದ್ದಾರೆ.

        ಪೊಲೀಸರ ಗುಂಡೇಟು ಎಡಗಾಲಿಗೆ ತಗುಲಿ ಗಾಯಗೊಂಡಿರುವ ಜೆಜೆ ನಗರದ ಬೋಡ್ಕ (34) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆರೋಪಿ ಬೋಡ್ಕಾ ನಡೆಸಿದ ಹಲ್ಲೆಯಿಂದ ಬ್ಯಾಟರಾಯನಪುರ ಪೆÇಲೀಸ್ ಪೇದೆ ಹರೀಶ್ ಗಾಯಗೊಂಡಿದ್ದಾರೆ.

          ಕಳೆದ ಶನಿವಾರ ಮಧ್ಯರಾತ್ರಿ 12ರ ವೇಳೆ ಹೊಸಗುಡ್ಡದಹಳ್ಳಿ ಬಳಿ ಕಾರಿನಲ್ಲಿ ಹೋಗುತ್ತಿದ್ದ ಎದುರಾಳಿಜಬೀವುಲ್ಲಾನನ್ನು ಅಡ್ಡಗಟ್ಟಿ ಸಹಚರರ ಗ್ಯಾಂಗ್ ಜತೆ ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಬೋಡ್ಕ ತಲೆಮರೆಸಿಕೊಂಡಿದ್ದ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.

          ಸಹಚರರ ಬಂಧನ: ಜಬೀವುಲ್ಲಾ ಕೊಲೆ ಪತ್ತೆ ಕಾರ್ಯ ಕೈಗೊಂಡ ವಿಶೇಷ ಪೊಲೀಸ್ ತಂಡವು ಕೃತ್ಯದಲ್ಲಿ ಬೋಡ್ಕ ಪ್ರಮುಖ ಆರೋಪಿಯಾಗಿರುವುದನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ತೀವ್ರಗೊಳಿಸಿ ಬೋಡ್ಕನ ಐವರು ಸಹಚರರನ್ನು ಬಂಧಿಸಿದ ತಂಡ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿತ್ತು. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬೋಡ್ಕ, ಜ್ಞಾನಭಾರತಿಯ ವಿಶ್ವೇಶ್ವರಯ್ಯ ಲೇಔಟ್‍ನ 4ನೇ ಬ್ಲಾಕ್‍ನಲ್ಲಿ ಬೋಡ್ಕ ಇಂದು ಬೆಳಿಗ್ಗೆ 6.30ರ ವೇಳೆ ಅಡಗಿರುವ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡಿತ್ತು.

          ಬೋಡ್ಕನನ್ನು ಕಂಡ ಬ್ಯಾಟರಾಯನಪುರ ಪೊಲೀಸ್ ಪೇದೆ ಹರೀಶ್ ಬೆನ್ನಟ್ಟಿ ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿ ಹರೀಶ್ ಮೇಲೆ ಹಲ್ಲೆಗೆ ಮುಂದಾಗಿದ್ದ.

           ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಇನ್ಸ್‍ಪೆಕ್ಟರ್ ವೀರೇಂದ್ರ ಪ್ರಸಾದ್ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಆ ಗುಂಡೇಟು ತಗುಲಿದ ಬೋಡ್ಕ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

2 ಕೊಲೆ 3 ಕೊಲೆಯತ್ನ:

           2016ರಲ್ಲಿ ಜೆಜೆ ನಗರದ ಯಾಕುಬ್ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಬೋಡ್ಕ, 2 ಕೊಲೆ, 3 ಕೊಲೆಯತ್ನ, ಕಳ್ಳತನ, ಹಲ್ಲೆ ಸೇರಿದಂತೆ 8ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಗುಜರಿ ಅಂಗಡಿ ನಡೆಸುತ್ತಿದ್ದ ಆರೋಪಿಯು ಸಹಚರರ ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ.

          ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬೋಡ್ಕಾನನ್ನು ಜೆಜೆ ನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿತ್ತು. ಕಳೆದ ಡಿ. 15 ರಂದು ಜಬೀವುಲ್ಲಾ ಕೊಲೆಯ ನಂತರ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲೂ ರೌಡಿ ಪಟ್ಟಿಗೆ ಕೂಡ ಬೋಡ್ಕಾನ ಹೆಸರು ಸೇರಿಸಲಾಗಿತ್ತು.

          ಕಳೆದ ಡಿ. 15 ರಂದು ಕೊಲೆಯಾದ ಜಬೀವುಲ್ಲಾ ಕೂಡ ಹಿಂದೆ ವೋಡ್ಕಾನ ಸ್ನೇಹಿತನಾಗಿದ್ದ. 2016ರಲ್ಲಿ ನಡೆದ ಯಾಕುಬ್ ಕೊಲೆಯಲ್ಲಿ ಇವರಿಬ್ಬರು ಭಾಗಿಯಾಗಿದ್ದರು. ನಂತರ ಬೋಡ್ಕಾನ ಸಹವಾಸ ಬಿಟ್ಟಿದ್ದ ಜಬೀವುಲ್ಲಾ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡು ಅಪರಾಧ ಕೃತ್ಯಗಳಿಂದ ದೂರ ಉಳಿದಿದ್ದ.

         ಸಹಚರರ ವಿಷಯವಾಗಿ ಇವರಿಬ್ಬರ ನಡುವೆ ದ್ವೇಷ ಬೆಳೆದಿದ್ದು, ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿಕೊಂಡು ಜಬೀವುಲ್ಲಾನನ್ನು ಅಡ್ಡಗಟ್ಟಿ ಕೊಲೆ ಮಾಡಲಾಗಿತ್ತು ಎಂದು ರವಿಚೆನ್ನಣ್ಣನವರ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link