ಹಾನಗಲ್ಲ :
ಬಾಳಂಬೀಡ ಏತ ನೀರಾವರಿ ಹೋರಾಟದ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲೂಕು ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ ಮಾತನಾಡಿ, ಹಲವು ವರ್ಷಗಳ ಬೆಳೆವಿಮೆ ಇನ್ನೂ ಬಾಕಿ ಇದೆ. ಇದರ ಬಗ್ಗೆ ಸರಕಾರ ಅನಾದರ ತೋರಿದೆ ಎಂದು ಆಪಾದಿಸಿದರು.
ಮಂಗಳಾವಾರ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದ ಅವರು, ರೈತರಿಗೆ ನ್ಯಾಯಯುತವಾಗಿ ಬರಬೇಕಾದ ಬೆಳೆವಿಮೆಯನ್ನೇ ಸರಿಪಡಿಸಲು ಸರಕಾರದಿಂದ ಅಗುತ್ತಿಲ್ಲ. ಇದು ರೈತರ ಬಗೆಗೆ ಸರಕಾರ ತೋರುತ್ತಿರುವ ನಿರ್ಲಕ್ಷವಾಗಿದೆ. ಬೆಳೆ ವಿಮೆ ಪರಿಶೀಲನೆಯನ್ನು ಖಾಸಗಿ ಕಂಪನಿಗಳಿಗೆ ನೀಡಿರುವುದು ಸರಿ ಅಲ್ಲ. ಮುಂದಿನ ದಿನಗಳಲ್ಲಿ ಸರಕಾರಿ ನೌಕರರೇ ಈ ಜವಾಬ್ದಾರಿ ನಿರ್ವಹಿಸಬೇಕು ಎಂದರು.
2015-16 ರ ಬೆಳೆವಿಮೆ 5 ಕೋಟಿಗೂ ಆಧಿಕ ಬಾಕಿ ಹಾನಗಲ್ಲ ತಾಲೂಕಿನ ರೈತರಿಗೆ ಬರಬೇಕಾಗಿದೆ. ಅದರಂತೆ ನಂತರದ ವರ್ಷಗಳಲ್ಲಿ ಅಕ್ಕಿ ಭತ್ತದ ವ್ಯತ್ಯಾಸ 18 ಕೋಟಿ ಬರಬೇಕಾಗಿದೆ. ಇದರೊಂದಿಗೆ ಇನ್ನೂ ಹಲವು ವರ್ಷಗಳ ಬೆಳೆ ವಿಮೆ ಬಾಕಿ 10 ಕೋಟಿಗೂ ಅಧಿಕ ಬರಬೇಕಾಗಿದೆ. ನೀರಾವರಿ ಖುಷ್ಕಿ ವ್ಯತ್ಯಾಸದ ಹಣ 13 ಕೋಟಿ ಹಣ 4386 ರೈತರಿಗೆ ಬರಬೇಕಾಗಿದೆ. ಇದನ್ನು ಕೊಡಲು ಹಿಂದೇಟು ಹಾಕುವ ಈ ಸರಕಾರಗಳಿಗೆ ರೈತರ ಬಗೆಗೆ ಅನಾದರವಿದೆ ಎಂದು ಆಪಾದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








