ಬೆಳಗಾವಿ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶವು ಗಮನಾರ್ಹವಾಗಿ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ರಾತ್ರಿ ವೇಳೆ ಅತಿ ಕಡಿಮೆ ತಾಪಮಾನ ದಾಖಲಾಗಿದೆ.ಈ ಪ್ರದೇಶಗಳು ಶೀತ ಗಾಳಿಗೆ ತುತ್ತಾಗಿದ್ದು, ಬಿದರ್ ಮತ್ತು ಮಡಿಕೇರಿಯಲ್ಲಿ 8.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.
ಉಳಿದಂತೆ ವಿಜಯಪುರದಲ್ಲಿ 9, ರಾಯಚೂರು 9.1, ಚಾಮರಾಜನಗರ 11.2 ಮತ್ತು ಕಲಬುರ್ಗಿಯಲ್ಲಿ 12.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ರಾಜಧಾನಿ ಬೆಂಗಳೂರಿನಲ್ಲಿ 13.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಕೆಲವು ಭಾಗಗಳಲ್ಲಿ 4.1 ಡಿಗ್ರಿ ಸೆಲ್ಸಿಯಸ್ ವರೆಗೂ ಉಷ್ಣಾಂಶ ಸಂಭವಿಸಿದೆ.ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ 20 ರಿಂದ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ.ಹಲವು ಪ್ರದೇಶಗಳಲ್ಲಿ ಮುಂಜಾನೆಯ ವೇಳೆ ಮಂಜುಮುಸುಕಿದ ವಾತಾವರಣ ಇರಲಿದ್ದು, 500 ಮೀಟರ್ ದೂರದವರೆಗಿನ ವರೆಗೂ ಏನೂ ಗೋಚರವಾಗುವುದಿಲ್ಲ. ಈ ವೇಳೆ ವಾಹನ ಸವಾರರು ದೀಪಗಳನ್ನು ಹಾಕಿಕೊಂಡು ಸಂಚರಿಸುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








