ಕೋಲ್ಕತಾ:
ಮೋದಿ ಸರ್ಕಾರದ ವಿರುಧ ಒಗ್ಗಟಾಗಿರುವಂತಹ ಎಡ ಹಾಗೂ ಕಾಂಗ್ರೇಸ್ ಪಕ್ಷಗಳು ತಮ್ಮ ಅಘೋಷಿತ ಪ್ರಧಾನಿ ಅಭ್ಯರ್ಥಿ ಯನ್ನಾಗಿಸಿಕೊಂಡಿರುವ ಶ್ರೀ ರಾಹುಲ್ ಗಾಂಧಿಯ ವಿಷಯದಲ್ಲಿ ಕೆಲ ರಾಜಕೀಯ ಪ್ರಮುಖರಲ್ಲಿ ಇನ್ನೂ ಅಸಮಾಧಾನ ಹೋಗಿಲ್ಲ ಹಾಗಾಗಿಯೂ ತತ್ವಕ್ಕೆ ಕಟ್ಟು ಬಿದ್ದು ಒಗ್ಗಟ್ಟಾಗಿರುವಂತಹ ಎಲ್ಲರು ಆಯ್ಕೆ ಮಾಡುವ ಅಭ್ಯರ್ಥಿಗೆ ಪಟ್ಟ ಸಿಗಲಿದೆ ಎಂದು ನಾಯಕರೆಲ್ಲರೂ ತೀರ್ಮಾನಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಒಮ್ಮತದ ನಿರ್ಧಾರಕ್ಕೆ ನಾವೂ ಸಹ ಬೆಂಬಲಿಸುತ್ತೇವೆ ಎಂದು ಹೇಳುವ ಮೂಲಕ ತಾವು ಸಹ ಕಾಂಗ್ರೇಸ್ ನೊಂದಿಗೆ ಇರುವುದನ್ನು ಮಮತ ಮತ್ತೆ ಖಚಿತ ಪಡಿಸಿದ್ದಾರೆ ಇದರಿಂದಾಗಿ ಮಹಾಘಟಬಂಧನ್ ಗೆ ಹೆಚ್ಚು ಬಲ ಬಂದಿದೆ.
ಮೊನ್ನೆ ಕರುಣಾ ನಿಧಿಯವರ ಪ್ರತಿಮೆ ಅನಾವರಣದ ಸಮಯದಲ್ಲಿ ಸ್ಟಾಲಿನ್ ಅವರು ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಹೇಳಿಕೆಯ ಜೋತೆಗೆ ಏಕೀಭವಿಸಿ ಮಮತ ವರು ಈ ಹೇಳಿಕೆ ನೀಡಿದ್ದಾರೆ ಮತ್ತು ಪ್ರಧಾನಮಂತ್ರಿ ಅಭ್ಯರ್ಥಿ ಕುರಿತು ಮಾತನಾಡಲು ಇದು ಸಕಾಲವಲ್ಲ. ಉತ್ತಮ ಬದಲಾವಣೆಗಾಗಿ ಭರವಸೆಗಳನ್ನಿಡೋಣ ಎಂದು ಆಶಾವಾದ ತೋರ್ಪಡಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








