ನವದೆಹಲಿ:
ದೇಶದ ಅತ್ಯಂತ ದೊಡ್ಡ ಸಂಪರ್ಕ ಜಾಲವಾದ ರೈಲ್ವೆ ಕೇಟರಿಂಗ್ ನಲ್ಲಿ ಅವ್ಯವಹಾರ ಮಾಡಿ ಸಿಕ್ಕಿಬಿದ್ದಿರುವ ಬಿಹಾರದ ಲಾಲು ಪ್ರಸಾದ್ ಯಾದವ್ ಗೆ ಇಂದು ಲಲ್ಪ ನೆಮ್ಮದಿ ದೊರಕಿದ್ದು ಮಧ್ಯಂತರ ಜಾಮೀನು ದೊರಕಿದೆ , ಭಾರತೀಯ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ (ಐಆರ್ಟಿಟಿಸಿ) ಗೆ ಸಂಬಂಧಿಸಿದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ ಎಂದು ಅಧಿಕೃತ ವರದಿ ಬಂದಿದೆ.
ದೇಶದ ಅತ್ಯನ್ನತ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ದಾಖಲಿಸಿದ್ದ ಈ ಪ್ರಕರಣದಲ್ಲಿ ಲಾಲೂಗೆ ಜನವರಿ 19ರವರೆ ಮಧ್ಯಂತರ ಜಾಮೀನು ನೀಡಿ ಅಲ್ಪ ನೆಮ್ಮದಿ ನೀಡಿದೆ.








