ಜಗಳೂರು :
ಮನೆಯಲ್ಲಿ ಅಡುಗೆಗೆ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮಗಳ ಮದುವೆಗೆ ಇಟ್ಟಿದ್ದ ಬೆಳ್ಳಿ , ಬಂಗಾರದ ಒಡವೆಗಳು ಹಾಗೂ 2 ಲಕ್ಷರೂ ನಗದು ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲೂಕಿನ ರಸ್ತೆ ಮಾಚಿಕೆರೆ ಗ್ರಾಮದ ಜರುಗಿದೆ.
ತಾಲೂಕಿನ ರಸ್ತೆ ಮಾಚಿಕೆರೆ ಗ್ರಾಮದ ಶರಣಮ್ಮ ಮತ್ತು ಷಡಕ್ಷರಪ್ಪ ಎಂಬ ದಂಪತಿಗಳಿಗೆ ಸೇರಿದ ಮನೆಯಲ್ಲಿ ಗುರುವಾರ ಬೆಳಗ್ಗೆ ಆಡುಗೆ ಕೊಣೆಯಲ್ಲಿ ಗ್ಯಾಸ್ ಖಾಲಿಯಾದ್ದರಿಂದ ಹೊಸ ಸಿಲಿಂಡರ್‍ನ್ನು ಹಾಕಿದ್ದಾರೆ. ನಂತರ ಸ್ವಲ್ಪ ಹೊತ್ತಲ್ಲೆ ಸಿಲಿಂಡರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸಲು ಕುಟುಂಬದವರು ಪ್ರಯತ್ನಿಸಲು ಮುಂದಾದರು ಸಹ ಪ್ರಯೋಜನವಾಗಲಿಲ್ಲ. ಬೆಂಕಿಯ ನರ್ತನ ಕಂಡ ಕುಟುಂಬದವರು ಮನೆಯಿಂದ ಹೊರ ಬಂದ ನಂತರ ಸಿಲಿಂಡರ್ ಸ್ಪೋಟ ಗೊಂಡ ಪರಿಣಾಮ ಮನೆ ಹಾಗೂ ಮನೆಯಲ್ಲಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಯಾವುದೇ ಪ್ರಾಣಾಪಾಯಗೊಂಡಿಲ್ಲ.
ಷಡಕ್ಷರಪ್ಪನ ಮಗಳಿಗೆ ಡಿ. 30 ರಂದು ನಿಶ್ಚಿತಾರ್ಥ ನಡೆಯ ಬೆಕಿತ್ತು ಸದರಿ ಕಾರ್ಯಕ್ರಮಕ್ಕೆ ಬೆಳ್ಳಿ , ಬಂಗಾರದ ವಸ್ತುಗಳು ಸೇರಿದಂತೆ 2 ಲಕ್ಷರೂ ನಗದು ಬೆಂಕಿಯ ರಬಸಕ್ಕೆ ಅರ್ಧ ಭರ್ದ ಸುಟ್ಟು ಕರಕಲಾಗಿದೆ
ಸ್ಥಳಕ್ಕೆ ತಹಶಿಲ್ದಾರ್ ಶ್ರೀಧರ ಮೂರ್ತಿ, ಭೇಟಿ ನೀಡಿ ಕುಟುಂಬದವರಿಗೆ ಸಂತ್ವಾನ ಹೇಳಿದರು. ಪಿ.ಎಸ್.ಐ.ಇಮ್ರಾನ್‍ಬೇಗ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಎಸ್.ವಿ. ರಾಮಚಂದ್ರ 10 ಸಾವಿರ ರೂ. ನೀಡಿದ ನಗದನ್ನು ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು ಸಿಲೆಂಡರ್‍ಸ್ಪೋಟಗೊಂಡು ಹಣ ಕಳೆದುಕೊಂಡ ಕುಟುಂಬಕ್ಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








