ಹಾವೇರಿ :
ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣಾ ಮಸೂದೆ-2016 ಹಾಗೂ ಟ್ರಾಫಿಕಿಂಗ್ ಪರ್ಸನ್ಸ್ ಬಿಲ್ಲ್ -2018 ರದ್ದುಗೊಳಿಸುವಂತೆ ಒತ್ತಾಯಿಸಿ ನಗರದ ಸಿದ್ದಪ್ಪ ಸರ್ಕಲಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ಪ್ರತಿಭಟಿಸಿ ತಹಶೀಲ್ದಾರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆಸಿ ಮಾತನಾಡಿ ಈಗಾಗಲೆ ಲೋಕಸಭೆಯಲ್ಲಿ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣಾ ಮಸೂದೆ-2016 ಹಾಗೂ ಟ್ರಾಫಿಕಿಂಗ್ ಪರ್ಸನ್ಸ್ ಬಿಲ್ಲ್ -2018ನ್ನು ಜಾರಿಗೆ ತಂದಿದ್ದು, ಸಮುದಾಯದ ಹಿತ ಕಾಯದ ಸಮುದಾಯದ ಅಭಿವೃದ್ದಿಗೆ ವಿರುದ್ದವಾಗಿರುವ ಹಾಗೂ ಲೋಕಸಭೆಯ ಸ್ಟ್ಯಾಂಡಿಂಗ್ ಕಮಿಟಿಯ ಶಿಫಾರಸ್ಸುಗಳನ್ನು ಸೇರಿಸದೆ ಸಮುದಾಯದ ಅಭಿಪ್ರಾಯಗಳನ್ನು ಪಡೆಯದೆ ತಾವುಗಳು ಈ ಬಿಲ್ಲುಗಳನ್ನು/ಕಾನೂನುಗಳನ್ನು ಜಾರಿಮಾಡಿರುತ್ತಿದ್ದು, ಸರ್ವೋಚ್ಚ ನ್ಯಾಯಾಲಯದ ತೃತೀಯಲಿಂಗಿಗಳ ಆದೇಶಕ್ಕೆ ವಿರುದ್ದವಾದ ಅಂಶಗಳನ್ನು ಒಳಗೊಂಡಿದ್ದು ಘನವೆತ್ತ ಸವೋಚ್ಚ ನ್ಯಾಯಾಲದ ಆದೇಶವನ್ನು ಉಲ್ಲಂಘಿಸುತ್ತಿದೆ ಹಾಗೂ ಮತ್ತೆ ಈ ಸಮುದಾಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಹೆಚ್ಚಿಸುವಂತಿದೆ.
ಶೋಷಿತರ ಪರವಾಗಿ ಕಾನೂನು/ಬಿಲ್ಲುಗಳನ್ನು ರಚಿಸುವಾಗ ಸಮುದಾಯದವರ ಜೊತೆಗೆ ಸಮಾಲೋಚನೆ ನಡೆಸಿ ಸಮುದಾಯ ಪರವಾದ,ಪ್ರಜಾಪ್ರಭುತ್ವ ಪರವಾದ,ಸಂವಿಧಾನದ ಆಶಯಗಳನ್ನು ಉಳಿಸುವ ಡಾ:ಬಿ ಆರ್ ಅಂಬೇಡ್ಕರ್ ಅವರ ತತ್ವ-ಸಿದ್ದಾಂತಗಳನ್ನು ಒಳಗೊಳ್ಳುವಂತೆ ಕಾನೂನು/ಬಿಲ್ಲುಗಳನ್ನು ರಚಿಸಬೇಕೆಂದು ಹಾಗೂ ಈಗಾಗಲೆ ಲೋಕಸಭೆಯಲ್ಲಿ ಜಾರಿಮಾಡಿರುವ ಈ ಎರಡು ಕಾನೂನುಗಳನ್ನು/ಬಿಲ್ಲುಗಳನ್ನು ರದ್ದುಮಾಡಬೇಕು ಇಲ್ಲವಾದಲ್ಲಿ ಸಮುದಾಯವರೊಟ್ಟಿಗೆ ಸಮಾಲೋಚನೆ ನಡೆಸಿ ಸೂಕ್ತವಾದ ತಿದ್ದುಪಡೆಯ ಮುಖಾಂತರ ಸಮುದಾಯದವರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಸ್ಟ್ಯಾಂಡಿಂಗ್ ಕಮಿಟಿಯ ಶಿಫಾರಸ್ಸುಗಳನ್ನು ಒಳಗೊಳ್ಳುವಂತೆ ಕಾನೂನು ರಚಿಸಬೇಕೆಂದು ಅಕ್ಷತಾ ಕೆಸಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಜಿಲ್ಲಾಧ್ಯಕ್ಷ ತನುಶ್ರೀ ಯು ಡಿ.ಮೊಹ್ಮದ್ ಐ.ಎನ್.ಸಾಧೀಕ್.ಎ.ಜಿ.ಸಾಕ್ಷಿ ಎಚ್ ಎಸ್.ಹರಿಪ್ರೀಯಾ.ಲಕ್ಷ್ಮೀ.ಮಾಲಾ.ಚಿತ್ರಾದಲಿತ ಸಂಘಟನೆಯ ಮುಖಂಡರಾದ ಹೊನ್ನೇಶ್ವರ ತಗಡಿನಮನಿ.ನಾಗರಾಜ ಎಚ್.ಸಂಜೀವಕುಮಾರ ಸಂಜೀವಣ್ಣನವರ.ಜಯಕರ್ನಾಟಕ ಸಂಘಟನೆ. ಸಾಹಿತಿಗಳ ಹಾಗೂ ಕಲಾವಿದರ ಬಳಗದವರು. ಎಸ್ಎಫ್ಐ ಸಂಘಟನೆಯ ಮುಖಂಡ ಬಸವರಜ ಭೋವಿ ಸಾಮಾಜಿಕ ಪರಿವರ್ತನಾ ಆಂದೋಲನ ಸಮಿತಿಯ ಹಸೀನಾ ಹೆಡಿಯಾಲ ಅನೇಕರು ಪಾಲ್ಗೊಂಡಿದ್ದರು.