“ಸ್ವಾವಲಂಬನೆ ಇಲ್ಲದವನಿಗೆ ಜಗತ್ತಿನ ಸಂಪತ್ತನ್ನು ಕೊಟ್ಟರು ವ್ಯರ್ಥ”

ಹಾವೇರಿ : 

       “ಸಮೃದ್ದರಾಷ್ಟ್ರಜಾತ್ಯಾತೀತಸಮಾಜಯುವಜನರಿಂದ ಮಾತ್ರ ಸಾಧ್ಯ”.ಯುವಜನತೆಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿತೊಡಗಬೇಕು”.ಜಗತ್ತಿನಲ್ಲಿಅತಿ ಹೆಚ್ಚು ಯುವಜನರನ್ನು ಹೊಂದರುವದೇಶ ಭಾರತ, ಶೇ 45% ರಷ್ಟುಯುವಜನತೆ ಭಾರತದಲ್ಲಿದ್ದಾರೆ.ಯುವಜನತೆ ಸಮಾಜದಲ್ಲಿನಜನರ ಕಷ್ಟಗಳಿಗೆ ಸಹಕರಿಸಬೇಕು.ಯುವಜನರು ಪರಾವಲಂಬಿಗಳಾಗದೇ ಸ್ವಾವಲಂಬಿಗಳಾಗಿ ಜೀವನವನ್ನು ನಡೆಸಬೇಕು “ಸ್ವಾವಲಂಬನೆ ಇಲ್ಲದವನಿಗೆ ಜಗತ್ತಿನ ಸಂಪತ್ತನ್ನು ಕೊಟ್ಟರುವ್ಯರ್ಥ” ಆದ್ದರಿಂದ ಯುವಜನರು ಸಮಯದ ಮಹತ್ವವನ್ನು ಅರಿತು ಸ್ವಾವಲಂಬಿಗಳಾಗಿ ಬದಕಬೇಕು.ಎಂದು ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ನಿರ್ದೇಶಕರು ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಅಧ್ಯಕ್ಷರಾದಎಸ್.

        ಎಚ್.ಮಜೀದ್ ಹೇಳಿದರು.ಅವರುಆಹಾರ ನಾಗರೀಕ ಸರಬರಾಜು ಮತ್ತುಗ್ರಾಹಕ ವ್ಯವಹಾರಗಳ ಇಲಾಖೆ, ಹಾವೇರಿ.ಚೈತನ್ಯಗ್ರಾಮೀಣಅಭಿವೃದ್ಧಿ ಸಂಸ್ಥೆ(ರಿ) ಹಾವೇರಿಇವರ ಸಂಯುಕ್ತಾಶ್ರಯದಲ್ಲಿಹಾವೇರಿಯ ಕಾಳಿದಾಸ ಪ್ರೌಢ ಶಾಲೆಯಲ್ಲಿಏರ್ಪಡಿಸಿದ “ಗ್ರಾಹಕರ ಹಕ್ಕು ಮತ್ತುಕಾಯ್ದೆಕುರಿತುಕಾರ್ಯಗಾರ”ವನ್ನು ಉದ್ಘಾಟಿಸಿ ಮಾತನಾಡಿದರು.

       ಗ್ರಾಹಕರು ಜಾಗೃತರಾಗುವ ಮೂಲಕ ತಾವು ಖರೀದಿಸುವ ವಸ್ತುಗಳಿಗೆ ರಶೀದಿ ಪಡೆದಾಗ ಮಾತ್ರ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದು.ನಾವು ಖರೀದಿಸುವ ವಸ್ತುಗಳಿಗೆ ರಶೀದಿ ಇಲ್ಲವಾದಲ್ಲಿ ದೂರು ದಾಖಲಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರುಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿಯನ್ನುಅರಿತುಕೊಂಡು ನಡೆಯಬೇಕು.ದೂರುದಾಖಲಿಸಲು ಗ್ರಾಹಕರುತಾವು ಖರೀದಿಸಿದ ವಸ್ತುಗಳಿಗೆ ಕಡ್ಡಾಯವಾಗಿ ರಶೀದಿ ಪಡೆದಿರಬೇಕು, ಯಾವುದೇ ಜಾಹಿರಾತುಗಳಿಗೆ ಮರುಳಾಗದೇ ಗ್ರಾಹಕನುತಾನುಖರೀದಿಸುವ ವಸ್ತುವಿನ ಪ್ರಮಾಣ ಮತ್ತುಗುಣಮಟ್ಟವನ್ನು ಪರೀಕ್ಷಿಸಿ ಖರೀದಿಸುವ ಮೂಲಕ ಜಾಗೃತಗ್ರಾಹಕರಾಗಿ ಬೆಳೆಯಬೇಕು, ಜಾಗೃತಗ್ರಾಹಕದೇಶದ ಸಂಪತ್ತುಎಂದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಎಸ್.ಎಫ್.ಎನ್. ಗಾಜಿಗೌಡ್ರುಇವರು ಮಾತನಾಡುತ್ತಾದುಶ್ಚಟಗಳಿಗೆ ಯುವ ಶಕ್ತಿಬಲಿಯಾಗದೆ ಸದಾದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಸಮತೋಲನ ಹೊಂದಿ ಉತ್ತಮ ನಾಯಕರಾಗಬೇಕೆಂದರು.ಗ್ರಾಮೀಣ ಸಮುದಾಯದ ಸಮಸ್ಯೆಯನ್ನು ಹೋಗಲಾಡಿಸಿ ಜನರಲ್ಲಿಉತ್ತಮಗುಣಮಟ್ಟದಜೀವನ ಶೈಲಿ ರೂಪಿಸಲು ಯುವಜನತೆ ಮುಂದಾಗಬೇಕು,ಯುವಜನತೆ ಸಮಾಜದಲ್ಲಿನಜನರ ಕಷ್ಟಗಳಿಗೆ ಸಹಕರಿಸಬೇಕು.ಯುವಕರಜೀವನದಲ್ಲಿ ಸಮುದ್ರದ ಅಲೆಗಳಂತೆ ಕಷ್ಟ-ಸುಖಗಳು ಹರಿದು ಬರುತ್ತವೆ.ಎಲ್ಲವನ್ನು ನಿಭಾಯಿಸುವ ಶಕ್ತಿ ಒಗ್ಗೊಡಿಸಿಕೊಳ್ಳಬೇಕು.ಯುವಕರುಉತ್ತಮ ಮಾನವಿಯ ಮೌಲ್ಯಗಳನ್ನು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸದೃಡರಾಷ್ಟ್ರಕಟ್ಟುವ ನೇತಾರರಾಗಬೇಕು, ಇಂದಿನ ಯುವಜನತೆಯನ್ನುಜಾಗೃತರನ್ನಾಗಿಸಲುಇಂತಹ ಕಾರ್ಯಕ್ರಮಗಳ ಅವಶ್ಯಕತೆತುಂಬಾಇದೆ, ಪ್ರತಿಯೊಬ್ಬರೂಇದರ ಸದುಪಯೋಗವನ್ನು ಪಡೆದುಕೊಳ್ಳಬೇಕುಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಾರುತಿ ಹರಿಜನಇವರು ಮಾತನಾಡುತ್ತಾಗ್ರಾಹಕರ ಹಿತರಕ್ಷಣಾಕಾಯ್ದೆ 1986ರಲ್ಲಿ ನೀಡಿರುವಗ್ರಾಹಕರ ಹಕ್ಕುಗಳಾದ “ಅಪಾಯವನ್ನುಂಟು ಮಾಡುವ ಸರಕುಗಳ ವಿರುದ್ಧರಕ್ಷಣೆ ಪಡೆಯುವ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಶೋಷಣೆಗೆ ಒಳಪಡುವುದರ ವಿರುದ್ಧ ಪರಿಹಾರ ಪಡೆಯುವ ಹಕ್ಕು ಹಾಗೂ ಗ್ರಾಹಕ ಶಿಕ್ಷಣ ಪಡೆಯುವ ಹಕ್ಕು”ಗಳನ್ನು ಪ್ರತಿಯೊಬ್ಬರೂ ಬಳಸಿ ತಮಗೆಆದ ನಷ್ಟದ ವಿರುದ್ಧಗ್ರಾಹಕನು ಸಹಿ ಮಾಡಿದದೂರನ್ನುಅಗತ್ಯ ಪ್ರತಿಗಳೊಂದಿಗೆ ಖುದ್ದಾಗಿಅಥವಾಅಂಚೆಯ ಮೂಲಕ ಸಂಬಂಧಿಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರನ್ನು ಸಲ್ಲಿಸುವ ಮೂಲಕ ಪರಿಹಾರವನ್ನು ಪಡೆಯಬಹುದು, ಪ್ರತಿಯೊಬ್ಬಗ್ರಾಹಕರುತಾವು ಪಡೆಯುವ ವಸ್ತುಗಳಿಗೆ ರಶೀದಿ ಪಡೆಯುವುದುಅತ್ಯಗತ್ಯಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಾಳಾಗಿ ಭಾಗವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದಶ್ರೀಎಂ.ಎಸ್. ಕೆಂಚನಗೌಡರ, ಶಿಕ್ಷಕರಾದ ಸಿ.ಜಿ.ಚಿಕ್ಕಮಠ ಹಾಗೂ ಶಾಲಾ ಸಿಬ್ಬಂದಿಗಳು ಮತ್ತು ಮಕ್ಕಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link