ರೈತ ದಿನಾಚರಣೆ ಕಾರ್ಯಕ್ರಮ

ಹಾವೇರಿ :

         ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯಲ್ಲಿನ ಜೀವಸತ್ವಗಳು ಕಡಿಮೆಯಾಗಿ ಮಣ್ಣಿನ ಫಲವತ್ತತೆಯು ಕಡಿಮೆಯಾಗಿ ಆ ಮೂಲಕ ರೈತರ ಆದಾಯವು ಕಡಿಮೆಯಾಗುತ್ತದೆ. ಇದಕ್ಕೆ ಮೂಲ ಕಾರಣ ರೈತರು ತಮ್ಮ ಭೂಮಿಗೆ ಅಪಾಯಕಾರಿ ಕಿಟನಾಶಕ & ರಾಸಾಯನಿಕ ಗೊಬ್ಬರದ ಬಳಕೆಯಿಂದ ಫಲವತ್ತಾದ ಭೂಮಿಗೆ ವಿಷ ಉಣಿಸಿದಂತಾಗುತ್ತದೆ ಎಂದು ಕಚುಸಾಪ ತಾಲೂಕ ಅಧ್ಯಕ್ಷ ಜಿ.ಎಸ್. ಕುಲಕರ್ಣಿ ಹೇಳಿದರು.

         ಜಿಲ್ಲೆಯ ಬ್ಯಾಡಗಿ ತಾಲೂಕಿನ ರಾಮಗೂಂಡನಹಳ್ಳಿ ಗ್ರಾಮದ ಯುವ ಪ್ರಗತಿಪರ ರೈತರಾದ ಮಂಜುನಾಥ ಬೀರಪ್ಪ ಕಾಡಮ್ಮನವರ ಹೊಲದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಲ್ಲಾ ಘಟಕ & ಎಂ.ಬಿ.ಎಫ್ ಕಂಪನಿಯ ಸಂಯುಕ್ತಾಶ್ರಯದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಷಪೂರಿತ ರಾಸಾಯನಿಕ ಬಳಿಕೆಯಿಂದ ಬೆಳೆಯುವ ಬೆಳೆಗಳು ಮನುಷ್ಯನ ಆರೋಗ್ಯದ ಮೇಲೆ ಮತ್ತು ಪರಿಸದರದ ಮೇಲೆ ವೇತರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ರೈತರು ಭೂತಾಯಿಗೆ ವಿಷ ಉಣ್ಣಿಸುವುದನ್ನು ನಿಲ್ಲಿಸಿ ಮಣ್ಣಿನ ಫಲವತ್ತತೆಗೆ ಸಾವಯವ ಕೃಷಿ ಮಾಡುವುದು ಅನಿವಾರ್ಯವಾಗಿದೆ ಎಂದರು.

          ರೈತ ಮಂಜುನಾತ ಕಾಡಮ್ಮನವರು ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ತಿಪ್ಪೆ ಗೊಬ್ಬರ, ಕುರಿ ಗೊಬ್ಬರ, ಮತ್ತು ಬ್ಯಾಕಟಿರಿಯಲ್ ಕಲ್ಜರ ಇರುವ ಕೆನಡಿಯನ್ ತಂತ್ರಜ್ಞಾನದ ಬ್ರೌನ್ ಗೋಲ್ಡ ಉಪಯೋಗದಿಂದ ಉತ್ತಮ ಗುಣಮಟ್ಟದ ಅಧಿಕ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದರು, ಅಂದಾನಿಕೊಪ್ಪ, ಕೆರೂಡಿ, ಕೊಲ್ಲಾಪುರ, ನೆಲ್ಲಿಕೊಪ್ಪ, ಕಾಗಿನೆಲೆ, ಇತ್ಯಾದಿ ಹಳ್ಳಿಗಳಿಂದ ಬಂದ ರೈತರಿಗೆ ಸನ್ಮಾಸಿ ಪುಸ್ತಕ ವಿತರಿಸಲಾಯಿತು, ಹಾಲಪ್ಪ ಕಾಡಮ್ಮನವರ, ಎಲ್.ಎಸ್. ಗೌಡರ, ನಾಗಪ್ಪ ಊದಗಟ್ಟಿ, ಫಕ್ಕೀರಗೌಡ ಮುದಿಗೌಡ್ರ, ಬಿ.ಬಿ. ಅಂಗಡಿ, ಮಂಜಯ್ಯ ಮಠದ, ಶಿವಪ್ಪ ಮಾವಿನಕಾಯಿ, ಎನ್.ಎಂ. ಬಣಕಾರ, ಕರಿಯಪ್ಪ, ಸಿದ್ದು ಅಮರಗೋಳ, ಸಿಡಿ ಗುಂಡೆನವರಮಠ, ರವಿ ಇಚ್ಚಂಗಿ, ಸದಾ ಹಿರೇಮಠ, ಮಾಂತೇಶ ಗೌಡ್ರ ಮುಂತಾದ ರೈತರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link