ಬೆಂಗಳೂರು
ಬಾಂಗ್ಲಾದಿಂದ ಭಾರತಕ್ಕೆ ಕೋಟಿ ಕೋಟಿ ಖೋಟಾ ನೋಟುಗಳನ್ನು ತಂದು ಚಲಾವಣೆ ಮಾಡುತ್ತಿದ್ದ ಜಾಲದ ಕಿಂಗ್ಪಿನ್ ಅಬ್ದುಲ್ ಖದೀರ್ ಕೊನೆಗೂ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಹಲವು ದಿನಗಳಿಂದ ತಲೆಮರೆಸಿಕೊಂಡು ತಲೆನೋವಾಗಿ ಪರಿಣಮಿಸಿದ್ದ ಪಶ್ಚಿಮ ಬಂಗಾಳ ಮೂಲದ ಅಬ್ದುಲ್ ಖಾದೀರ್ (32)ನನ್ನು ಖಚಿತ ಮಾಹಿತಿ ಆಧರಿಸಿ ಬಂಧಿಸಿರುವ ಕರ್ನಾಟಕ ವಿಭಾಗದ ಎನ್ಐಎ ಅಧಿಕಾರಿಗಳು 5 ಕೋಟಿ ಮೌಲ್ಯದ ಖೋಟಾ ನೋಟ್ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಆರೋಪಿಯು ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಜಾಲದ ಮಾಹಿತಿ ಪಡೆದು ಇತರ ಆರೋಪಿಗಳ ಪತ್ತೆಗೆ ಅಧಿಕಾರಿಗಳು ಬಲೆಬೀಸಿದ್ದಾರೆ ಬಾಂಗ್ಲಾದೇಶದಿಂದ ಭಾರತಕ್ಕೆ ಕೋಟಿಗಟ್ಟಲೆ ಖೋಟಾ ನೋಟು ತಂದು ವಿವಿಧ ನಗರಗಳಲ್ಲಿ ಚಲಾವಣೆ ಮಾಡುತ್ತಿದ್ದು ಈತನೇ ಖೋಟಾನೋಟು ಚಲಾವಣೆ ಜಾಲದ ಕಿಂಗ್ಪಿನ್ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಹೊಸ 2000 ರೂಪಾಯಿ ನೋಟುಗಳನ್ನು ಮಾತ್ರ ಖೋಟಾ ಮಾಡಿ ಆರೋಪಿಯು ಚಲಾವಣೆ ಮಾಡಿದ್ದನು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
