ಶಿಗ್ಗಾವಿ :
ದೇಶ ಕಂಡ ಮುತ್ಸದ್ದಿ ರಾಜಕಾರಣಿ, ಅಜಾತ ಶತ್ರು, ಮಾಜಿ ಪ್ರಧಾನಿ ದಿವಗಂತ ಅಟಲ್ ಬಿಹಾರಿ ವಾಜಪೇಯಿಯವರ 94 ನೇ ಜನ್ಮ ದಿನಾಚಣೆಯನ್ನು ಪಟ್ಟಣದ ಬಾಜಪ ಕಾರ್ಯಾಲಯದಲ್ಲಿ ತಾಲೂಕ ಅಧ್ಯಕ್ಷ ದೇವಣ್ಣ ಚಾಕಲಬ್ಬಿ ಮತ್ತು ಮುಖಂಡರು ಕಾರ್ಯಕರ್ತರು ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚುವ ಮೂಲಕ ಆಚರಿಸಿದರು.
ಪಟ್ಟಣದ ಬಾಜಪ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ ಮಾತನಾಡಿ ದೇಶ ಕಂಡ ಅಪ್ರತೀಮ ರಾಜಕಾರಣಿ ವಾಜಪೇಯಿವರು 3 ಬಾರಿ ಪ್ರಧಾನಿಯಾಗಿ ವಿಶೇಷ ಕಾರ್ಯಕ್ರಮಗಳ ಮೂಲಕ ಅದರಲ್ಲಿ ಚತುಷ್ಪತ ರಸ್ತೆ ಯೋಜನೆ ಮಾಡುವ ಮೂಲಕ ಈಡಿ ದೇಶಕ್ಕೆ ಮತ್ತು ರಾಷ್ಟ್ರಕ್ಕೆ ಮಾದರಿಯನ್ನಾಗಿ ಮಾಡಿದವರು ಜೊತೆಗೆ ನದಿ ಜೋಡಣೆಯಂತಹ ಕನಸನ್ನು ಹೊಂದಿದ್ದ ಮೇಧಾವಿ ವ್ಯಕ್ತಿ ಎಂದ ಅವರು ಅವರ ದಾರಿಯಲ್ಲಿಯೇ ನರೇಂದ್ರ ಮೋದಿಯವರು ಮುಂದುವರೆಯುತ್ತಿರುವುದು ಹೆಮ್ಮೆಯ ವಿಷಯ ಅಲ್ಲದೆ ವಾಜಪೇಯಿಯವರ ಸವಿನೆನಪಿಗಾಗಿ 100 ರೂ ನಾಣ್ಯಕ್ಕೆ ವಾಜಪೇಯಿವರ ಭಾವಚಿತ್ರ ಅಳವಡಿಸುತ್ತಿರುವುದ ಸ್ವಾಗತಾರ್ಹ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಲ್ಲೇಶಪ್ಪ ಹರಿಜನ ಮಾತನಾಡಿ ಭಾರತ ದೇಶದಲ್ಲಿ ವಾಜಪೇಯಿಯವರು ಪ್ರಧಾನಿಯಾದ ಮೇಲೆ ಬದಲಾವಣೆ ಗಾಳಿ ಬಿಸಿದೆ ಎಂದ ಅವರು ಇದೇ 15-20 ವರ್ಷಗಳ ಹಿಂದೆ ಒಂದೇ ಚಾನಲ್‍ನಲ್ಲಿ ಕಾರ್ಯಕ್ರಮಗಳನ್ನು ವಿಕ್ಷಿಸುತ್ತಿದ್ದ ನಾವು ವಾಜಪೇಯಿಯವರ ಕಾಲದಲ್ಲಿ ಪ್ರಮೋದ ಮಹಾಜನ್ ಅವರು ದೂರ ಸಂಪರ್ಕ ಇಲಾಖೆಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿವಿಧ ಚಾನಲ್‍ಗಳನ್ನ ತೆರೆಯುವ ಮೂಲಕ ಭಾರತದಲ್ಲಿ ತಂತ್ರಜ್ಞಾನವನ್ನು ಈ ರೀತಿಯು ಬೆಳೆಸಿಕೊಳ್ಳಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟರು.
ಈ ಸಂಧರ್ಭದಲ್ಲಿ ಪುರಸಭೆ ಅದ್ಯಕ್ಷ ಶಿವಪ್ರಸಾದ ಸುರಗಿಮಠ, ಕೆ.ಸಿ.ಸಿ ಬ್ಯಾಂಕ ನಿರ್ಧೇಶಕ ಗಂಗಣ್ಣ ಸಾತಣ್ಣವರ, ಜನತಾ ಬಝಾರ ಅಧ್ಯಕ್ಷ ಕರಿಯಪ್ಪ ಕಟ್ಟಿಮನಿ, ವಿಜಯ ಬುಳ್ಳಕ್ಕನವರ, ಮಹಿಳಾ ಮುಖಂಡರಾದ ಮಲ್ಲಮ್ಮ ಸೋಮನಕಟ್ಟಿ, ಚಂದ್ರು ಹರವಿ, ಶಂಕ್ರಣ್ಣ ಇಂಗಳಗಿ, ಫಕ್ಕಿರಗೌಡ ಭರಮಗೌಡ್ರ, ಶಿವನಗೌಡ ಪಾಟೀಲ್, ರಮೇಶ ಬೆಡಕಿ, ಆನಂದ ಸುಭೆದಾರ, ಸಂತೋಷ ದೊಡ್ಡಮನಿ, ಬಾಜಪ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ