ಹರಪನಹಳ್ಳಿ
ತಾಲೂಕಿನ ಹುಲ್ಲಿಕಟ್ಟಿ ಬಳಿ ಅರಣ್ಯ ದಲ್ಲಿ ಜರುಗುವ ಗುಳೇದಲೆಕ್ಕಮ್ಮ ದೇವಿ ಜಾತ್ರೆಯಲ್ಲಿ ಮೂಲ ಭೂತ ಸೌಕರ್ಯ ಒದಗಿಸಿ ಯಶಸ್ವಿಗೊಳಿಸಲು ಶಾಸಕ ಜಿ.ಕರುಣಾಕರರೆಡ್ಡಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬುಧವಾರ ಸೂಚಿಸಿದರು.
ಅವರು ಗುಳೇದ ಲೆಕ್ಕಮ್ಮ ಜಾತ್ರಾ ಸ್ಥಳದಲ್ಲಿ ಆಯೋಜಿಸಿದ್ದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರದಂತೆ ಕ್ರಮ ಕೈಗೊಳ್ಳಬೇಕು ಎಂದು ಇಂಜಿನಿಯರ ರಮೇಶನಾಯ್ಕ ಅವರಿಗೆ ಹೇಳಿದರು.
ಬರ ದಿಂದ ನೀರಿನ ಸಮಸ್ಯೆ ಇದೆ, ರೈತರ ಖಾಸಗಿ ಬೋರುಗಳಿಂದ ನೀರನ್ನ ಪಡೆದು ಭಕ್ತರಿಗೆ ಪೂರೈಕೆ ಮಾಡಲಾಗುವುದು, 4 ನಲ್ಲಿಗಳನ್ನು ಸ್ಥಾಪನೆ ಮಾಡಲಾಗುವುದು, 4 ಟ್ಯಾಂಕರ್ ನಿಂದ ಸಹ ನೀರು ಸರಬರಾಜು ಮಾಡಲಾಗುವುದು, ಇರುವ ಎಲ್ಲಾ ಸಿಸ್ಟನ್ ಗಳನ್ನು ತುಂಬಿಸಲಾಗುವುದು ಎಂದು ಇಂಜಿನಿಯರ್ ರಮೇಶನಾಯ್ಕ ಸಭೆಗೆ ತಿಳಿಸಿದರು.
ಪ್ರಥಮ ಚಿಕಿತ್ಸಾ ಕೇಂದ್ರಸ್ಥಾಪನೆ, ಎಲ್ಲಾ ಔಷದಿ ದಾಸ್ತಾನು ಮಾಡಲಾಗುವುದು ಎಂದು ವೈದ್ಯರು ಹೇಳಿದರು. ಆಗ ಶಾಸಕರು ಅಂಬಲೆನ್ಸ್ ನಿಲುಗಡೆ ಮಾಡುವಂತೆ ಸೂಚಿಸಿದರು.
ಬೆಸ್ಕಾ ವತಿಯಿಂದ ನಿರಂತರ ಜ್ಯೋತಿ ವಿದ್ಯುತ್ ನಿಲುಗಡೆ ಯಾಗದಂತೆ ಕಾರ್ಯನಿರ್ವಹಿಸಬೇಕು, ಕುಡಿಯುವ ನೀರಿಗೆ ಅಗತ್ಯ ವಿದ್ಯುತ್ ಕಲ್ಪಿಸಬೇಕು ಎಂದು ಶಾಸಕರು ಸಂಬಂಧ ಪಟ್ಟ ಬೆಸ್ಕಾಂ ಸೆಕ್ಸನ್ ಅಧಿಕಾರಿಗೆ ಹೇಳಿದರು.
ಗ್ರಾಮ ಪಂಚಾಯ್ತಿ ವತಿಯಿಂದ ಬ್ಲೀಚಿಂಗ್ ಪೌಡರು ಜಾತ್ರಾ ಸ್ಥಳದಲ್ಲಿ ಸಿಂಪಡಿಸಲು ಸಹ ಅವರು ತಿಳಿಸಿದರು. ಸಿಪಿಐ ಡಿ.ದುರುಗಪ್ಪ ಅವರು ಪೊಲೀಸ್ ಉಪ ಠಾಣೆ ಸ್ಥಾಪನೆ ಮಾಡಿ 60 ಜನ ಸಿಬ್ಬಂದಿಯನ್ನು ಇಲ್ಲಿ ನಿಯೋಜನೆ ಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಸಿಸಿ ಕ್ಯಾಮರ ಸಹ ಅಳವಡಿಸಲು ಸಭೆಯಲ್ಲಿ ಪ್ರಸ್ಥಾಪ ವಾಯಿತು. ಸಭೆಯಲ್ಲಿ ಜಿ.ಪಂ ಸದಸ್ಯೆ ಎಚ್ .ಹಬಿ. ಪರಶುರಾಮಪ್ಪ, ತಾ.ಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾದ್ಯಕ್ಷ ಮಂಜನಾಯ್ಕ, ಪುರಸಭಾ ಅಧ್ಯಕ್ಷ ಎಚ್ .ಕೆ. ಹಾಲೇಶ, ತಾ.ಪಂ ಸದಸ್ಯ ಹುಲ್ಲಿಕಟ್ಟಿ ಚಂದ್ರಪ್ಪ, ಡಿವೈಎಸ್ಪಿ ನಾಗೇಶ ಐತಾಳು, ಮುಖಂಡರಾದ ಸಣ್ಣ ಹಾಲಪ್ಪ, ಲೋಕೇಶ, ರಾಘವೇಂದ್ರಶೆಟ್ಟಿ, ಎಂ.ಪಿ.ನಾಯ್ಕ, ಟು.ಪಿ.ನಾಗರಾಜ, ಹುಲ್ಲಿಕಟ್ಟಿ ಭಾಷು, ಕಂದಾಯ ಇಲಾಖೆಯ ಸೋಮನಾಥ, ತಾ.ಪಂ ಇಓ ಮಮತಾ ಹೊಸಗೌಡರು , ಗೋಣಿಬಸಪ್ಪ, ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ