ಭೋಪಾಲ:
ವಿದ್ಯಾರ್ಥಿಗಳಿಗೆ ವಿದ್ಯೆ ಹೇಳಿಕೊಡಬೇಕಾಗಿರುವ ಸಹಾಯಕ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರೇ ಹೊಡೆದಾಡಿಕೊಂಡಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ಉಜ್ಜಯಿನಿಯ ಸರ್ಕಾರಿ ಕಾಲೇಜಿನಲ್ಲಿ ಇಂತಹ ಘಟನೆ ನಡೆದಿದೆ.
ಪ್ರಾಂಶುಪಾಲ ಶೇಖರ್ ಮೆದಾಮ್ವರ್ ಅವರೊಂದಿಗೆ ಮಾತನಾಡುತ್ತಾ ಕುಳಿತಿದ್ದ ಸಹಾಯಕ ಪ್ರಾಧ್ಯಾಪಕ ಬ್ರಹ್ಮದೀಪ್ ಅಲುನೆ ಪ್ರಾಂಶುಪಾಲರ ಮೇಲೆ ಕೈ ಎತ್ತಿದ್ದಾರೆ.
ಅವರಿಬ್ಬರು ಹೊಡೆದಾಡಿಕೊಳ್ಳುತ್ತಿರುವುದನ್ನು ಕಂಡು ಸಹೋದ್ಯೋಗಿಗಳು ಓಡಿ ಬಂದು, ಜಗಳ ಬಿಡಿಸಿದ್ದಾರೆ.
ಬ್ರಹ್ಮದೀಪ್ ಕಾಲೇಜಿನ ಕೆಲಸದ ಅವಧಿಯಲ್ಲಿ 5ಕಿ.ಮೀ ವಾಕಿಂಗ್ ಹೋಗುವ ವಿಚಾರದಲ್ಲಿ ಜಗಳವಾಗಿದೆ. ಪ್ರಾಂಶುಪಾಲರಿಗೆ ಹೊಡೆದ ಆರೋಪದಲ್ಲಿ ಬ್ರಹ್ಮದೀಪ್ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ