ಹರಪನಹಳ್ಳಿ:
ನೂತನ ವರ್ಷಾಚರಣೆ ಸಂಭ್ರಮಕ್ಕೆ ತಾಲ್ಲೂಕಿನ ಜನತೆ ಸೋಮವಾರ ಬೆಳಗಿನಿಂದಲೇ ತಯಾರಿಯಲ್ಲಿ ತೊಡಗಿದ್ದರು. ಪಟ್ಟಣದ ವಿವಿಧ ಬೇಕರಿಗಳಲ್ಲಿ ಕೇಕ್ ಖರೀದಿ ಜೋರಿತ್ತು.
ಪಟ್ಟಣದ ನಂದಿ ಪ್ರೇಸ್ ಜ್ಯೂಸ್ ಆ್ಯಂಡ್ ಸ್ವೀಟ್ಸ್, ಆದಿತ್ಯ ಬ್ರೆಡ್ ಬಜಾರ್, ಎಸ್ಎಲ್ವಿ ಅಯ್ಯಂಗಾರ್, ಮಂಜುನಾಥ ಬೇಕರಿಗಳಲ್ಲಿ ಹೊಸವರ್ಷ ಸ್ವಾಗತಿಸುವ ವಿವಿಧ ನಮೂನೆಯ ಕೇಕ್ಗಳನ್ನು ತಯಾರಿಸಲಾಗಿತ್ತು. ಒಂದು ಕೆ.ಜಿ ಕೇಕ್ಗೆ 200 ರೂ.ದಿಂದ 250ರೂ.ವರೆಗೆ ದರವಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಕೇಕ್ ಖರೀದಿಸಲು ಅಂಗಡಿಗಳ ಮುಂದೆ ಸಾಲುಗಟ್ಟಿದ್ದರು.
`ಕಳೆದ ವರ್ಷ 4 ಕ್ವಿಂಟಲ್ ಕೇಕ್ ವ್ಯಾಪಾರ ನಡೆದಿತ್ತು. ತಾಲ್ಲೂಕಿನಲ್ಲಿ ಬರಗಾಲ ಆವರಿಸಿ ವ್ಯಾಪಾರ ಕುಸಿತ ಕಂಡಿದೆ’ ಎನ್ನುತ್ತಾರೆ ನಂದಿ ಪ್ರೆಸ್ ಜ್ಯೂಸ್ ಮತ್ತು ಸ್ವೀಟ್ಸ್ ಅಂಗಡಿ ಮಾಲೀಕ ರಾಜು. `ಐದು ವರ್ಷದಿಂದ ಕೇಕ್ ಮಾರಾಟ ಮಾಡುತ್ತಿದ್ದು, ಋತುಮಾನಕ್ಕೆ ತಕ್ಕಂತೆ ವ್ಯಾಪಾರ ನಡೆಯುತ್ತದೆ. ಡಿ.31 ಮತ್ತು ಜ.1ರಂದು ಎರಡು ದಿನ ಕೆಲಸದಲ್ಲಿ ಸಕ್ರಿಯರಾಗಿರುತ್ತೇವೆ’ ಎನ್ನುತ್ತಾರೆ ಶ್ರೀನಿವಾಸ್ ಅವರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ